ಬೆಂಗಳೂರು: ಪಂಚೆ ಧರಿಸಿ ಬಂದ ಕಾರಣ ಹೇಳಿ ರೈತನಿಗೆ ಅವಮಾನ ಮಾಡಿದ ಜಿ.ಟಿ.ಮಾಲ್ ಅನ್ನು 7 ದಿನಗಳ ಕಾಲ ಮುಚ್ಚಿಸಲು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಸದನದಲ್ಲಿ ಮಾತನಾಡಿದ ಸಚಿವ ಭೈರತಿ ಸುರೇಶ್ ಅವರು, ಜಿ.ಟಿ.ಮಾಲ್ ವಿಚಾರ ಸಂಬಂಧ ಬಿಬಿಎಂಪಿ ಆಯುಕ್ತರ ಜೊತೆ ಮಾತನಾಡಿದ್ದೇನೆ. ಈ ಬಗ್ಗೆ ಕಾನೂನಿನಲ್ಲಿ ಅವಕಾಶವಿದೆ ಎಂದಿದ್ದಾರೆ. ಹೀಗಾಗಿ 7 ದಿನಗಳ ಕಾಲ ಜಿ.ಟಿ.ಮಾಲ್ ಅನ್ನು ಮುಚ್ಚಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಂಚೆ ಧರಿಸಿ ಮಗನ ಜೊತೆ ಬಂದ ರೈತನನ್ನು ಜಿ.ಟಿ.ಮಾಲ್ ಸಿಬ್ಬಂದಿ ಒಳಗಡೆ ಬಿಡದೇ ಅವಮಾನಿಸಿದ್ದರು. ಘಟನೆ ನಡೆಯುತ್ತಿದ್ದಂತೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಜಿ.ಟಿ.ಮಾಲ್ ಮಾಲೀಕ ಘಟನೆ ಸಂಬಂಧಿಸಿದಂತೆ ಕ್ಷಮೆ ಕೋರಿದ್ದರು. ಇದಲ್ಲದೇ ರೈತ ಫಕೀರಪ್ಪರನ್ನು ಕರೆದು ಸನ್ಮಾನಿಸಿದ್ದರು.