ಬೆಂಗಳೂರು: ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಡಿಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ ಜೈಲುಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಇದನ್ನು ಓದಿ: ಮೈಸೂರು | ಎಐನಲ್ಲಿ ಕ್ರಿಯೇಟ್ ಮಾಡಿರುವ ಚಿರತೆ ಫೋಟೋ ವೈರಲ್
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ಮಂಗಳೂರು, ಮೈಸೂರು, ವಿಜಯಪುರ, ಬೆಳಗಾವಿ ಜಿಲ್ಲಾ ಕಾರಾಗೃಹಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಕೈದಿಗಳ ಬಳಿ ಮೊಬೈಲ್‌ಗಳು, ಚಾಕು, ಮಾದಕ ಪದಾರ್ಥಗಳು ಪತ್ತೆಯಾಗಿವೆ.
ಪರಪ್ಪನ ಅಗ್ರಹಾರದಲ್ಲಿ 6 ಮೊಬೈಲ್ ಹಾಗೂ 4 ಚಾಕುಗಳು, ಮೈಸೂರಿನಲ್ಲಿ 9 ಫೋನ್‌ಗಳು ಹಾಗೂ 11 ಸಿಮ್ ಕಾರ್ಡ್‌ಗಳು, ಬೆಳಗಾವಿಯಲ್ಲಿ 4 ಫೋನ್‌ಗಳು ಹಾಗೂ ಹೊರಗೆ ಎಸೆಯಲ್ಪಟ್ಟಿದ್ದ 366 ಗ್ರಾಂ ಗಾಂಜಾ, ವಿಜಯಪುರದಲ್ಲಿ 1 ಫೋನ್ ಹಾಗೂ ಮಂಗಳೂರಿನಲ್ಲಿ 4 ಫೋನ್‌ಗಳು ಪತ್ತೆಯಾಗಿವೆ.





