Mysore
24
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಬಿಪಿಎಲ್‌ ಕಾರ್ಡ್‌ದಾರರಿಗೆ ಜನವರಿಯಿಂದ ಇಂದಿರಾ ಕಿಟ್:‌ ಸಚಿವ ಮುನಿಯಪ್ಪ

ಬೆಂಗಳೂರು: ಬಿಪಿಎಲ್‌ ಕಾರ್ಡುದಾರರಿಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಇಂದಿರಾ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ಕಿ ಹೆಚ್ಚಾಯಿತು ಎಂಬ ಭಾವನೆ ಇದೆ. ಹಾಗಾಗಿ ಇಂದಿರಾ ಕಿಟ್‌ ಎಂದು ಹೊಸ ಯೋಜನೆ ಜಾರಿ ಮಾಡುತ್ತೇವೆ. ಜನವರಿ, ಫೆಬ್ರವರಿಯಲ್ಲಿ ಬೇಳೆ, ಸಕ್ಕರೆ, ಉಪ್ಪು ವಿತರಣೆ ಮಾಡುತ್ತೇವೆ ಎಂದರು.

ಇದನ್ನೂ ಓದಿ:-ಅಶ್ಲೀಲ ಮೆಸೇಜ್:‌ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ

ಹೊರ ರಾಜ್ಯಗಳಿಗೆ ಪಡಿತರ ಅಕ್ರಮ ಸಾಗಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ವಿವಿಧೆಡೆ 574 ಜನರನ್ನು ಅರೆಸ್ಟ್‌ ಮಾಡಿದ್ದೇವೆ. ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಇನ್ನು ಮುಂದೆ ಹಾಗೆ ನಡೆಯಲ್ಲ ಎಂದು ತಿಳಿಸಿದರು.

ಇನ್ನು ಅರ್ಹರ ಬಿಪಿಎಲ್‌ ಕಾರ್ಡ್‌ ರದ್ದು ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾರ್ಡ್‌ ರದ್ದಾಗಿದ್ದರೇ ತಕ್ಷಣವೇ ತಹಶೀಲ್ದಾರ್‌ಗಳನ್ನು ಭೇಟಿ ಮಾಡಿ ಹಾಕಿದರೆ 15 ದಿನಗಳೊಳಗೆ ಪಡಿತರ ಕಾರ್ಡ್‌ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.

Tags:
error: Content is protected !!