ಬೆಂಗಳೂರು: ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಇರುವುದರಿಂದ ಪ್ರಯಾಣಿಕರ ಪರದಾಟ ಮುಂದುವರೆದಿದೆ.
ಇಂಡಿಗೋ ವಿಮಾನ ಸಮಸ್ಯೆ ಬೆನ್ನಲ್ಲೇ ಇತರ ವಿಮಾನಗಳ ಟಿಕೆಟ್ ದರ ಭಾರಿ ಏರಿಕೆಯಾಗಿದೆ. ಜೊತೆಗೆ ವಿಮಾನಗಳಂತೆ ಬಸ್ ಟಿಕೆಟ್ ದರಗಳೂ ದುಪ್ಪಟ್ಟಾಗಿದ್ದು, ಪ್ರಯಾಣಿಕರು ಕಂಗಾಗಿದ್ದಾರೆ.
ಬೆಂಗಳೂರಿನಿಂದ ಮುಂಬೈ, ಪುಣೆ ನಗರಗಳಿಗೆ ಸಂಚರಿಸುವ ಖಾಸಗಿ ಬಸ್‌ಗಳ ಪ್ರಯಾಣ ದರ ಭಾರೀ ಹೆಚ್ಚಳವಾಗಿದೆ. ದೇಶಾದ್ಯಂತ ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.





