Mysore
25
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಭಾರತ ಹಿಂದೂ ರಾಷ್ಟ್ರ : ಭಾಗವತ್‌ ಹೇಳಿಕೆಗೆ ಎಚ್‌ಸಿಎಂ ಆಕ್ಷೇಪ

ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರು ಭಾರತ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳಿರುವುದಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತವು ಸರ್ವ ಜಾತಿ ಮತ್ತು ಧರ್ಮಗಳನ್ನು ಸಮಾನವಾಗಿ ಒಳಗೊಂಡಂತಹ ಜಾತ್ಯತೀತ ದೇಶ. ಇದನ್ನೇ ನಮ್ಮ ದೇಶದ ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಆದರೆ ಒಂದು ದಿನವೂ ಈ ದೇಶದ ಸಂವಿಧಾನದ ಪುಟಗಳಲ್ಲಿ ಏನಿದೆ ಎಂಬುದನ್ನು ಕಣ್ಣೆತ್ತಿಯೂ ನೋಡದೇ ಬರೀ ಮನುಸ್ಮೃತಿಯನ್ನೇ ಪ್ರತಿಪಾದಿಸುವ ಭಾಗವತ್ ಅವರಿಗೆ ಧರ್ಮ ಎಂದರೆ ಏನೆಂಬುದು ಈವರೆಗೂ ತಿಳಿದಿಲ್ಲ ಎಂದಿದ್ದಾರೆ.

ಇದನ್ನೂ ಓದಿ :-ಕೆಂಪುಕೋಟೆ ಬಳಿ ಸ್ಫೋಟ ; ದಿಲ್ಲಿಯಲ್ಲಿ ಹೈ ಅಲರ್ಟ್‌

ಈ ನೆಲದಲ್ಲಿ ಸ್ವಾಮಿ ವಿವೇಕಾನಂದರಿಂದ ಹಿಡಿದು ಬಹಳಷ್ಟು ಮಂದಿ ಸಂತರು, ಧರ್ಮ ಎಂದರೆ ಏನು ಎಂಬ ಸಂಗತಿಯನ್ನು ಸ್ಪಷ್ಟವಾಗಿ ಹೇಳಿ ಹೋಗಿದ್ದಾರೆ. ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅಂತಹ ಮಹನೀಯರೂ ತಮಗೆ ಕುಡಿಯಲು ನೀರುಕೊಡದ, ತಮ್ಮನ್ನು ಸಮಾನವಾಗಿ ಕಾಣದ ಹಿಂದೂ ಧರ್ಮದ ಅಮಾನವೀಯತೆಯನ್ನು ಪ್ರಶ್ನಿಸಿ, ಆ ಧರ್ಮವನ್ನೇ ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಾರೆ. ಹೀಗಿರುವಾಗ ಭಾರತ ಹಿಂದೂ ರಾಷ್ಟ್ರ ಆಗುತ್ತದೆ ಎಂದು ಆಗಾಗ್ಗೆ ಹೇಳುತ್ತಲೇ ಇರುವ ಮೋಹನ್ ಭಾಗವತ್ ಅವರು ಮೊದಲು ದೇಶದ ಜನರ ಕ್ಷಮೆ ಯಾಚಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

Tags:
error: Content is protected !!