Mysore
21
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಸೀಸನಲ್‌ ಫ್ಲೂ ಹೆಚ್ಚಳ : ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು : ರಾಜ್ಯದಲ್ಲಿ ಸೀಸನಲ್ ಫ್ಲೂ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಡಿಸೆಂಬರ್, ಜನವರಿಯಿಂದ ಮಾರ್ಚ್ ತನಕ ಸೀಸನಲ್ ಫ್ಲೂ ಹೆಚ್ಚಳದ ಭೀತಿ ಇರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಸೋಂಕಿತರ ಎಂಜಿಲಿನಿಂದ ಹರಡುವ ಸೋಂಕು ಇದಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಮಕ್ಕಳು, ಹಿರಿಯರು, ಗರ್ಭಿಣಿಯರು, ಕೋಮಾರ್ಬಿಟೀಸ್ ಪೇಶೆಂಟ್‌ಗಳಿಗೆ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆಯಿದ್ದು, ಜ್ವರ, ಕೆಮ್ಮು, ಕೆಂಪು ಗುಳ್ಳೆ, ಹಸಿವು ಆಗದಿರುವುದು, ಮೈ-ಕೈ ನೋವು, ಶೀತ, ಒಣ ಕೆಮ್ಮು ಇದರ ಪ್ರಮುಖ ಗುಣ ಲಕ್ಷಣಗಳಾಗಿವೆ. ಸೀಸನಲ್ ಫ್ಲೂ ಸಾಮಾನ್ಯವಾಗಿ ಒಂದು ವಾರ ಕಾಲ ಇರುತ್ತದೆ. ಕೆಲವೊಂದು ಸಲ ೩ ವಾರಗಳ ಕಾಲ ಇರಲಿದೆ. ಹೀಗಾಗಿ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ.

ಇದನ್ನು ಓದಿ: ಕರ್ನಾಟಕದಲ್ಲಿ ಮೈಕೊರೆಯುವ ಚಳಿ : 7ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಸೀಸನಲ್ ಫ್ಲೂ ಲಕ್ಷಣಗಳು
ಆರೋಗ್ಯ ತಜ್ಞರ ಪ್ರಕಾರ, ಸೀಸನಲ್ ಫ್ಲೂನ ಪ್ರಮುಖ ಲಕ್ಷಣಗಳಲ್ಲಿ ಜ್ವರ, ಕೆಮ್ಮು, ಶೀತ, ಒಣ ಕೆಮ್ಮು, ಮೈ-ಕೈ ನೋವು, ತಲೆನೋವು, ಹಸಿವು ಕಡಿಮೆಯಾಗುವುದು ಸೇರಿವೆ. ಸಾಮಾನ್ಯವಾಗಿ ಈ ಸೋಂಕು ಒಂದು ವಾರದೊಳಗೆ ನಿಯಂತ್ರಣಕ್ಕೆ ಬರಬಹುದು, ಕೆಲವರಲ್ಲಿ ಇದು ೨-೩ ವಾರಗಳವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಲಕ್ಷಣಗಳು ತೀವ್ರವಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯವಾಗಿದೆ.

ಸೂಚನೆಗಳು ಏನು?
*ಐಎಲ್‌ಐ, ಸಾರಿ ಪ್ರಕರಣಗಳ ಬಗ್ಗೆ ಗಮನ ಹರಿಸಲು ಸೂಚನೆ
* ಪ್ರತಿ ದಿನ ಕನಿಷ್ಠ ೫ರಷ್ಟು ಐಎಲ್‌ಐ ಕೇಸ್, ೧೦೦ರಷ್ಟು ಸಾರಿ ಕೇಸ್‌ಗಳ ಪರೀಕ್ಷೆ ಮಾಡಬೇಕು
*ಎಲ್ಲಾ ಪ್ರಯೋಗಾಲಯಗಳಲ್ಲಿ ಸೂಕ್ತ ಟೆಸ್ಟಿಂಗ್ ಕಿಟ್ ಇರಿಸಿಕೊಳ್ಳಲು ಸೂಚನೆ
*ಅಗತ್ಯ ಔಷಧಗಳ ಶೇಖರಣೆ, ಪಿಪಿಇ ಕಿಟ್ ಗಳು, ಎನ್೯೫ ಮಾಸ್ಕ್ ಸೇರಿ ಅಗತ್ಯ ಔಷಧಗಳ ಶೇಖರಣೆಗೆ ಸೂಚನೆ
*ಮಾತ್ರೆಗಳನ್ನು ದಾಸ್ತಾನ ಮಾಡಿ ಅಗತ್ಯಕ್ಕೆ ತಕ್ಕಂತೆ ಪ್ರಿಸ್ಕ್ರೈಬ್ ಮಾಡಬೇಕು
* ಇನ್-ಯೆನ್ಜಾ ಲಸಿಕೆ ಶೇಖರಣೆ, ಹೆಲ್ತ್ ಕೇರ್ ವರ್ಕರ್ಸ್, ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳು ಸೂಕ್ತ ಲಸಿಕೆ ಪಡೆಯುವಂತೆ ಸಲಹೆ
*ಕ್ಲಿನಿಕಲ್ ಮ್ಯಾನೇಜ್ಮೆಂಟ್ ಹಾಗೂ ಕ್ರಿಟಿಕಲ್ ಕೇರ್ ಸಿದ್ಧತೆ, ವೆಂಟಿಲೇಟರ್‌ಗಳ ಸಿದ್ಧತೆಗೆ ಸಲಹೆ
ಕಮ್ಯುನಿಟಿ ಅವೇರ್ನೆಸ್, ರಿಯಲ್ ಟೈಮ್ ಮಾನಿಟರಿಂಗ್ ನಡೆಸುವಂತೆ ಸಲಹೆ

Tags:
error: Content is protected !!