Mysore
22
broken clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ನನ್ನನ್ನು ಸಿಎಂ ಮಾಡುವುದಾದರೆ ಬಿಜೆಪಿಗೆ ವಾಪಸ್‌ ಹೋಗುತ್ತೇನೆ: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌

ಬೆಳಗಾವಿ: ನನ್ನನ್ನು ಸಿಎಂ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ವಾಪಸ್‌ ಹೋಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಬೇಡಿಕೆ ಇಟ್ಟಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಅವರು, ಸ್ವತಃ ಅಶೋಕ್‌ ಅವರೇ ನನ್ನನ್ನು ಚೇಂಬರ್‌ಗೆ ಕರೆದು ಮಾತನಾಡಿದರು. ಯತ್ನಾಳ್‌ ಅವರೇ ನೀವು ಬಿಜೆಪಿಗೆ ವಾಪಸ್‌ ಆಗಲೇಬೇಕು. ಬಿಜೆಪಿ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ನೀವು ಪಕ್ಷಕ್ಕೆ ಮರಳಿ ಬನ್ನಿ ಎಂದಿದ್ದಾರೆ. ಆದರೆ ನನ್ನನ್ನು ಸಿಎಂ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ಮರಳಿ ಬರುತ್ತೇನೆ ಎಂದು ಹೇಳಿದ್ದೇನೆ ಎಂದರು.

ದೆಹಲಿಗೆ ನಿಯೋಗದೊಂದಿಗೆ ಹೋಗಿ ಅಮಿತ್‌ ಶಾ ಅವರನ್ನು ಭೇಟಿಯಾಗುವ ಕುರಿತು ಚರ್ಚೆ ನಡೆಸಲಾಯಿತು. ಏನೇ ಇದ್ದರೂ ನಾನು ಸುಮ್ಮನೆ ಬಿಜೆಪಿಗೆ ಹೋಗಲ್ಲ. ನನ್ನನ್ನು ಸಿಎಂ ಮಾಡುತ್ತಾರೆ ಅನ್ನುವುದಾದರೆ ಮಾತ್ರ ಹೋಗುತ್ತೇನೆ. ಇಲ್ಲವಾದಲ್ಲಿ ನಾವೇ ಜೆಸಿಬಿ ಪಕ್ಷವನ್ನು ಕಟ್ಟುತ್ತೇವೆ ಎಂದು ಹೇಳಿದರು.

Tags:
error: Content is protected !!