ಬೆಂಗಳೂರು: ನನ್ನ ಬಳಿ ಯಾವುದೇ ಬಣ ಇಲ್ಲ. ನಾನು ಗುಂಪುಗಾರಿಕೆ ಮಾಡಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಾಸಕರ ದೆಹಲಿ ಯಾತ್ರೆ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನ ಬಳಿ ಯಾವುದೇ ಬಣ ಇಲ್ಲ. ನಾನು ಗುಂಪುಗಾರಿಕೆ ಮಾಡುವುದಿಲ್ಲ. ಗುಂಪುಗಾರಿಕೆ ಎನ್ನುವುದು ನನ್ನ ರಕ್ತದಲ್ಲೇ ಇಲ್ಲ ಎಂದು ಹೇಳಿದರು.
ಇದನ್ನು ಓದಿ: ಸಿಎಂ ಬದಲಾವಣೆ ವಿಚಾರ: ವರಿಷ್ಠರ ತೀರ್ಮಾನವೇ ಅಂತಿಮ ಎಂದ ತನ್ವೀರ್ ಸೇಠ್
ಇನ್ನು ಶಾಸಕರು, ಸಚಿವರು ದೆಹಲಿಗೆ ಹೋಗುವುದರಲ್ಲಿ ತಪ್ಪೇನಿದೆ. ಅದು ಅವರ ಹಕ್ಕು, ಹೈಕಮಾಂಡ್ ಜೊತೆ ಮಾತನಾಡಲು ಅವರು ದೆಹಲಿಗೆ ಹೋಗಿದ್ದಾರೆ. ಡಿನ್ನರ್ ಮೀಟಿಂಗ್‌ಗಳು ರಾಜಕೀಯದಲ್ಲಿ ನಡೆಯುತ್ತಿರುತ್ತದೆ. ಇದರಲ್ಲಿ ತಪ್ಪೇನಿದೆ ಎಂದು ಹೇಳಿದರು.
ನಾನೇ ಸಿಎಂ ಆಗಿರುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರ ವಿಚಾರಧಾರೆಗಳನ್ನು ಹೇಳಿದ್ದಾರೆ. ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಹೇಳಿದರು.





