ಬೆಂಗಳೂರು: ಜೂನ್.23ರಂದು ಇಡಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಇಡಿ ನೋಟಿಸ್ ಬಂದಿರುವುದು ನಿಜ. ನೋಟಿಸ್ ಕೊಟ್ಟಿದ್ದಾರೆ ವಿಚಾರಣೆಗೆ ಹಾಜರಾಗುತ್ತೇನೆ. ಇಡಿಯವರು ಏನೇನು ಕೇಳುತ್ತಾರೋ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎದು ಹೇಳಿದರು.
ಇನ್ನು ಆರೋಪಿ ಐಶ್ವರ್ಯಾಗೌಡ ಜೊತೆ ಯಾವುದೇ ವ್ಯವಹಾರ ಇಲ್ಲ. ಎರಡು ಕಾರ್ಯಕ್ರಮಕ್ಕೆ ಕರೆದಿದ್ದ ಹಿನ್ನೆಲೆ ನಾನು ಭಾಗಿಯಾಗಿದ್ದೆ ಅಷ್ಟೇ. ಇಡಿ ಅಧಿಕಾರಿಗಳ ಸಂಪೂರ್ಣ ತನಿಖೆಗೆ ನಾನು ಸಹಕಾರ ನೀಡುತ್ತೇನೆ ಎಂದರು.





