ಬೆಂಗಳೂರು: ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಬಿಜೆಪಿ ಆರೋಪಗಳು ನಿರಾಧಾರ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಬಿಜೆಪಿ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನನ್ನ ಮೇಲೆ ಅಸೂಯೆಯಿಂದ ಬಿಜೆಪಿ ಅವರು ಆರೋಪ ಮಾಡುತ್ತಿದ್ದಾರೆ. ಪಾರದರ್ಶಕವಾಗಿಯೇ ಎಲ್ಲಾ ಕೆಲಸ ಆಗಿದೆ. ಏನಾದರೂ ದಾಖಲಾತಿ ಇದ್ದರೆ ಬಿಜೆಪಿಯವರು ಬರವಣಿಗೆ ಮೂಲಕ ದೂರು ಕೊಡಲಿ ಪರಿಶೀಲನೆ ಮಾಡುತ್ತೇನೆ ಎಂದರು.
ಇದನ್ನೂ ಓದಿ:-ನ.2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಮುಂದಾಗಿದ್ದ ಆರ್‌ಎಸ್‌ಎಸ್‌ಗೆ ಹಿನ್ನಡೆ
ಇನ್ನು ಯಾರಿಗಾದರೂ ದೂರು ಕೊಡಲಿ. ನಾನು ರಾಜೀನಾಮೆ ಕೊಡುವುದಿಲ್ಲ. ನನ್ನ ರಾಜೀನಾಮೆ ಕೇಳಿದಾಗಲೇ ಅವರ ಉದ್ದೇಶ ಗೊತ್ತಾಗಿದೆ. ಮೊದಲು ಅವರು ದಾಖಲಾತಿ ಕೊಡಲಿ. ನಂತರ ನಾನು ಪರಿಶೀಲನೆ ಮಾಡಿ ಉತ್ತರ ಕೊಡುತ್ತೇನೆ ಎಂದು ಹೇಳಿದರು.





