Mysore
27
scattered clouds
Light
Dark

ಎನ್‌ಡಿಎ ಸಭೆಯಲ್ಲಿ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ: ಎಚ್.ಡಿ ಕುಮಾರಸ್ವಾಮಿ

ನವದೆಹಲಿ:  ನರೇಂದ್ರ ಮೋದಿ ಅವರ ದೆಹಲಿ ನಿವಾಸದಲ್ಲಿ ಇಂದು(ಜೂ.6) ನಡೆದ ಎನ್‌ಡಿಎ ಮಿತ್ರ ಪಕ್ಷದ ಸಭೆಯಲ್ಲಿ ಜೆಡಿಎಸ್‌ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಭಾಗವಹಿಸಿದ್ದರು. ಈ ಬಗ್ಗೆ ದೆಹಲಿಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಭೆಯಲ್ಲಿ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ.

ಈ ಸಭೆ ಪರಸ್ಪರ ಅಭಿನಂದಿಸುವ, ಶುಭಾಷಯ ಮಿನಿಮಯ ಮಾಡಿಕೊಳ್ಳುವ ಸಭೆಯಷ್ಟೆ, ಅಷ್ಟು ಬಿಟ್ಟರೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದರು.

ಎಲ್ಲರೂ ಒಟ್ಟಾಗಿರೋಣ ಮತ್ತು ಒಟ್ಟಾಗಿ ಮುಂದೆ ಸಾಗೋಣ ಅಂತ ಮೋದಿ ಅವರು ಹೇಳಿದ್ದಾರೆ. ಸಚಿವ ಸಂಪುಟ ರಚನೆಯ ಬಗ್ಗೆ ಚರ್ಚೆಯಾಗಿಲ್ಲ ಜೊತೆಗೆ ನಾನು ಕೂಡ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದ ಅವರು, ತನ್ನನ್ನು ಕೃಷಿ ಸಚಿವನಾಗಿ ಮಾಡುವ ವಿಷಯ ಕೇವಲ ಊಹಾಪೋಹ ಎಂದರು.

ಕುಮಾರಸ್ವಾಮಿಗೆ ಸಚಿವ ಸ್ಥಾನ ಕೊಡಲು ಒತ್ತಾಯ
ಅತ್ತ ದೆಹಲಿಯಲ್ಲಿ ಕೃಷಿ ಸಚಿವ ಸ್ಥಾನ ಕೇವಲ ಊಹಾಪೋಹ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇತ್ತ ಅವರ ಅಭಿಮಾನಿಗಳು ಕುಮಾರಸ್ವಾಮಿಗೆ ಸಚಿವ ಸ್ಥಾನ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಅಷ್ಟೆ ಅಲ್ಲದೇ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಗೆದ್ದ ಡಾ.ಸಿ.ಎನ್‌ ಮಂಜುನಾಥ್‌ ಅವರಿಗೂ ಸಹ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.