ಧಾರವಾಡ: ಸಿಎಂ ಆಗಲು ಯಾರಿಗೆ ತಾನೇ ಆಸೆ ಇರೋದಿಲ್ಲ ಹೇಳಿ. ನನಗೂ ಕೂಡ ಆ ಆಸೆ ಇದೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.
ಈ ಬಗ್ಗೆ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶಪಾಂಡೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನನಗೂ ಕೂಡ ಸಿಎಂ ಆಗಬೇಕೆಂಬ ಆಸೆಯಿದೆ. ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಮುಡಾ ವಿಚಾರದಲ್ಲಿ ಸಿಎಂ ಪಾತ್ರ ಏನೂ ಇಲ್ಲ. ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಗೊತ್ತು. ಹೀಗಾಗಿ ಅವರು ಮೊದಲು ಬಿಜೆಪಿ ಪಾದಯಾತ್ರೆಗೆ ಹೋಗಲ್ಲ ಎಂದಿದ್ದರು. ಬಳಿಕ ಬಿಜೆಪಿ ಹೈಕಮಾಂಡ್ ಹೇಳಿದ್ದಕ್ಕೆ ಪಾದಯಾತ್ರೆಗೆ ಹೋಗಿದ್ದರು ಎಂದರು.
ಇನ್ನು ಎರಡೂವರೆ ವರ್ಷದ ಬಳಿಕವೂ ಸಿಎಂ ಬದಲಾವಣೆ ಇಲ್ಲ. ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಎಲ್ಲೂ ಕೂಡ ಸಿಎಂ ಬದಲಾವಣೆ ಮಾಡುವ ವಿಷಯವೇ ಪ್ರಸ್ತಾಪ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.