Mysore
25
broken clouds
Light
Dark

ಬೆಂಗಳೂರಲ್ಲಿ ಭೀಕರ ಹತ್ಯೆ: ಶೀಲ ಶಂಕಿಸಿ ಪತ್ನಿಯ ಕತ್ತು ಕೊಯ್ದು ಕೊಂದ ಪತಿ

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪತಿ ಆಕೆಯನ್ನು ಚೇರ್‌ಗೆ ಕಟ್ಟಿಹಾಕಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ನಡೆದಿದೆ.

ಪತ್ನಿ ನವ್ಯಾ(24) ಕೊಲೆಯಾದ ಮಹಿಳೆ. ಕಳೆದ 3 ವರ್ಷಗಳ ಹಿಂದೆ ದಂಪತಿ ವಿವಾಹವಾಗಿದ್ದರು. ಚಿಕ್ಕಬಳ್ಳಾಪುರ ಮೂಲದವನಾದ ಪತಿ ಕಿರಣ್‌ ಕ್ಯಾಬ್‌ ಚಾಲಕನಾಗಿದ್ದ. ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದ ಪತ್ನಿ ಕೊರೊಯೊಗ್ರಾಫರ್‌ ಆಗಿದ್ದರು.

ಇನ್ನೂ ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.