Mysore
23
broken clouds

Social Media

ಶನಿವಾರ, 19 ಏಪ್ರಿಲ 2025
Light
Dark

ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ಸಾವು

ಗದಗ: ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಆಲ್ಟೊ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಭಾನುವಾರ(ಆ.18) ಬೆಳಿಗ್ಗೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಸಾರಿಗೆ ಬಸ್‌ ಕುಳಗೇರಿಯಿಂದ ಹುಬ್ಬಳ್ಳಿಯತ್ತ ತೆರಳುತ್ತಿತ್ತು. ಕಾರು ಹುಬ್ಬಳ್ಳಿಯಿಂದ ಕೊಣ್ಣೂರು ಕಡೆ ತೆರಳುವಾಗ ಈ ದುರ್ಘಟಣೆ ಸಂಭವಿಸಿದೆ.

ಮೃತರು ಹಾವೇರಿ ಮೂಲದವರಾಗಿದ್ದು, ರುದ್ರಪ್ಪ ಅಂಗಡಿ(55) ಪತ್ನಿ ರಾಜೇಶ್ವರಿ(45) ಮಗಳು ಐಶ್ವರ್ಯ(16) ಮಗ ವಿಜಯ(12) ಎಂದು ಸಿಪಿಐ ಮಂಜುನಾಥ್‌ ತಿಳಿಸಿದ್ದಾರೆ.

Tags: