Mysore
20
clear sky

Social Media

ಬುಧವಾರ, 11 ಫೆಬ್ರವರಿ 2026
Light
Dark

ದತ್ತಾತ್ರೇಯ ಹೊಸಬಾಳೆ ವಿರುದ್ಧ ಗೃಹ ಸಚಿವ ಪರಮೇಶ್ವರ್‌ ಕೆಂಡಾಮಂಡಲ

CM will resolve the MLAs' dissatisfaction: Minister G. Parameshwara

ಬೆಂಗಳೂರು: ಸಂವಿಧಾನದಿಂದ ಜಾತ್ಯಾತೀತ ಪದ ಬಿಡಬೇಕು ಎಂಬ ಆರ್‍ಎಸ್‍ಎಸ್‍ನ ದತ್ತಾತ್ರೇಯ ಹೊಸಬಾಳೆ ಹೇಳಿಕೆಯೇ ಅಪ್ರಸ್ತುತವಾದುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.

ಈ ಕುರಿತು ಬೆಂಗಳೂರು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್‍ನ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಸರಿಯಲ್ಲ. ಭಾರತದ ಸಂವಿಧಾನ ಸಾಕಷ್ಟು ಅಧ್ಯಯನ ಮಾಡಿದ ಬಳಿಕ ರಚನೆ ಮಾಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್‌ರವರು ಬೇರೆ ಬೇರೆ ರಾಷ್ಟ್ರಗಳ ಸಂವಿಧಾನವನ್ನು ಪರಿಶೀಲಿಸಿ ಭಾರತದ ಪರಿಸ್ಥಿತಿ ಹಾಗೂ ವಿವಿಧ ಪದರಗಳನ್ನು ಅರ್ಥೈಸಿಕೊಂಡು ಜಾತ್ಯಾತೀತ ಪದವನ್ನು ಅಳವಡಿಸಿದ್ದಾರೆ ಎಂದರು.

1957ರಿಂದಲೂ ಈವರೆಗೂ ಭಾರತೀಯರಾದ ನಾವು ಸಂವಿಧಾನವನ್ನು ಪಾಲನೆ ಮಾಡಿಕೊಂಡು ಬಂದಿದ್ದೇವೆ. ಇದೊಂದು ಟೈಮ್ ಟೆಸ್ಟೆಡ್ ಸಂವಿಧಾನ. ಯಾವುದೇ ರೀತಿಯ ತೊಂದರೆ ಇಲ್ಲದಂತೆ ನಡೆದುಕೊಂಡು ಬರುತ್ತಿದೆ. ಹಾಗೆಯೇ ಮುಂದುವರೆಯಬೇಕೂ ಕೂಡ ಎಂದರು.

ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿ, ಮುಕ್ತ ಅವಕಾಶ ಸಿಗಬೇಕು ಎಂಬುದು ಜಾತ್ಯತೀತತೆಯ ಅರ್ಥವಾಗಿದೆ. ಹೊಸಬಾಳೆಯವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ವಿಶ್ವದಲ್ಲೇ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಕಾರಗೊಳಿಸಿದ ಸಂವಿಧಾನ ಭಾಷೆ, ಸಂಸ್ಕೃತಿ, ಧರ್ಮದ ವಿಭಿನ್ನತೆ ನಡುವೆ ನಮ್ಮನ್ನು ಏಕತೆಯಿಂದ ಬದುಕುವಂತೆ ಮಾಡಿದೆ. ಇದನ್ನು ಬದಲಾವಣೆ ಮಾಡುವ ವಿಚಾರದಲ್ಲಿ ರಾಜಿಯ ಮಾತೇ ಇಲ್ಲ ಎಂದು ಹೇಳಿದರು.

Tags:
error: Content is protected !!