Mysore
25
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕೊಳಗೇರಿ ನಿವಾಸಿಗಳ ಪುನರ್‌ ವಸತಿಗೆ ʼಹೈʼ ಆದೇಶ

ಬೆಂಗಳೂರು : ನಗರದ ಹೃದಯ ಭಾಗದಲ್ಲಿರುವ ಚಾಮರಾಜಪೇಟೆಯ ಪ್ರತಿಷ್ಠಿತ ಟಿ.ಆರ್. ಮಿಲ್ಸ್ ಕಂಪನಿಯ ಚಂದ್ರ ಸ್ಪಿನಿಂಗ್ ಮಿಲ್ಸ್ ಜಾಗದಲ್ಲಿ ಕೊಳಗೇರಿ ನಿವಾಸಿಗಳಿಗೆ ಪನರ್ ವಸತಿ ಕಲ್ಪಿಸಿಕೊಡಲು‌ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಪರವಾಗಿ ಕರ್ನಾಟಕ ಸರ್ಕಾರ ಆರು ಎಕರೆ ಭೂಮಿ ಸ್ವಾಧೀನಕ್ಕೆ 2005 ರಲ್ಲಿ ಹೊರಡಿಸಿದ ಅಧಿಸೂಚನೆಯನ್ನು ರದ್ದುಗೊಳಿಸಿ ರಾಜ್ಯ ಹೈಕೋರ್ಟ್‌ ಆದೇಶ ಹೊರಡಿಸಿದೆ.

ಇಪ್ಪತ್ತು ವರ್ಷಗಳ ಸುದೀರ್ಘವಾದ ಕಾನೂನು ಹೋರಾಟದ ನಂತರ ಹೈಕೋರ್ಟ್ ಆದೇಶ ಹೊರಡಿಸಿದ್ದು ಚಂದ್ರ ಸ್ಪಿನಿಂಗ್ ಅಂಡ್ ವಿವಿಂಗ್ ಮಿಲ್ಸ್ ಹಾಗೂ ಇತರರ ಭೂಸ್ವಾಧೀನಕ್ಕೆ ಕೊಳಚೆ ನಿರ್ಮೂಲನಾ ಮಂಡಳಿ ಪರವಾಗಿ ಕರ್ನಾಟಕ ಸರ್ಕಾರ ಹೊರಡಿಸಿದ ಅಧಿಸೂಚನೆ ಹೈಕೋರ್ಟ್ ತೀರ್ಪಿನಿಂದ ರದ್ದಾಗಿದೆ.

ಹೈಕೋರ್ಟ್ ‌ನ್ಯಾಯಮೂರ್ತಿ‌ ಎಂ ನಾಗಪ್ರಸನ್ನ ಅವರ ಏಕ ಸದಸ್ಯ ‌ಪೀಠ ಕೊಳಚೆ ಕರ್ನಾಟಕರದ ಅಧಿಸೂಚನೆ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಬೆಂಗಳೂರು ನಗರದ‌ ಹೃದಯಭಾಗದಲ್ಲಿರುವ ದೇವನಾಥಚಾರ್ ಸ್ಟ್ರೀಟ್, ಚಾಮರಾಜಪೇಟೆ ಗವಿಪುರಂ ಸಮೀಪ ಇರುವ ಚಂದ್ರ ಸ್ಪಿನಿಂಗ್ ಎಂಡ್ ವಿವಿಂಗ್ ಮಿಲ್ಸ್ ಪ್ರೈವೆಟ್ ಲಿಮಿಟೆಡ್ ಮತ್ತು ಇತರರ ಆರು ಎಕರೆ ಜಮೀನನ್ನು ಕೊಳಗೇರಿ ನಿವಾಸಿಗಳಿಗೆ ಪುನರ್ ವಸತಿ ಸೌಲಭ್ಯ ಕಲ್ಪಿಸಲು ಭೂ ಸ್ವಾಧೀನಕ್ಕೆ ಕರ್ನಾಟಕ ಸರ್ಕಾರ 2005 ರಲ್ಲಿ ಅಧಿಸೂಚನೆ ಹೊರಡಿಸಿತು.

ಕರ್ನಾಟಕ ಸರ್ಕಾರದ ಭೂಸ್ವಾಧೀನ ಅಧಿಸೂಚನೆ ರದ್ದುಪಡಿಸುವಂತೆ ಮನವಿಮಾಡಿ ಚಂದ್ರ ಸ್ಪಿನಿಂಗ್ ಅಂಡ್ ವಿವಿಂಗ್ ಮಿಲ್ಸ್ ನಿರ್ದೇಶಕರು ಹಾಗೂ ಇತರರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದರು.
(ರಿಟ್ ಪಿಟಿಷನ್ ನಂಬರ್ 21192 / 2005 ಅಡಿ)

ವಿಚಾರಣೆ ಸಮಯದಲ್ಲಿ ಉಚ್ಚ ನ್ಯಾಯಾಲಯ ತನ್ನ ಅಭಿಪ್ರಾಯ ವ್ಯಕ್ತಪಡಿಸಿ. ಕೊಳಚೆ ನಿರ್ಮೂಲನಾ ‌ಮಂಡಳಿಯ ಸೆಕ್ಸನ್ 20 ರ ಪ್ರಕಾರ ಭೂ ಪರಿಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ. ಹಾಲಿ ಪ್ರಸ್ತುತದಲ್ಲಿರುವ ಭೂಸ್ವಾಧೀನ ನಿಯಮದಂತೆ‌ ಪರಿಹಾರ ನೀಡುವಂತೆ ಆದೇಶ ನೀಡಿತು. ಅಲ್ಲದೆ ಮುಂದುವರಿದ ನ್ಯಾಯಮೂರ್ತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಭೂಸ್ವಾಧಿನ‌ಮಾಡಿ ಪಡಿಸಿಕೊಳ್ಳುವುದು ತಪ್ಪಲ್ಲ, ಆದರೆ ಮಾರುಕಟ್ಟೆ ಮೌಲ್ಯದ ಪ್ರಕಾರ ಭೂ ಪರಿಹಾರ‌ ನಿಗದಿಪಡಿಸಬೇಕು ಎಂದು ಎಂದು ಆದೇಶ ನೀಡಿತು.

ಹೈಕೋರ್ಟ್ ಆದೇಶದ ವಿರುದ್ದ ಕರ್ನಾಟಕ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಹೈಕೋರ್ಟ್ ವಿಭಾಗಿಯ ಪೀಠವು ಏಕ ಸದಸ್ಯ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿಯಿತು.

ವಿಭಾಗೀಯ‌ ಪೀಠದ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತು. ಎಸ್‌ಎಲ್‌ಪಿ (SLP) 18942/2013 ಅರ್ಜಿ ವಿಚಾರಣೆ ಮಾಡಿದ ಸುಪ್ರೀಂಕೋರ್ಟ್ ಸೆಕ್ಸನ್ 20 ಪ್ರಕಾರ ಪರಿಹಾರ ಹಣ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಠೇವಣಿ ಇಡುವಂತೆ ಆದೇಶಿಸಿತು, ಅಲ್ಲದೆ ಕೊಳಚೆ ನಿರ್ಮೂಲನಾ ‌ಮಂಡಳಿಯ ಸೆಕ್ಷನ್ 20 ನಿಯಮ‌ ಅಸಂವಿಧಾನಿಕ ಎಂದು ಅಸಮಧಾನ ವ್ಯಕ್ತಪಡಿಸಿತು. ಅಲ್ಲದೆ ಈ ಪ್ರಕರಣದ ಮರುವಿಚಾರಣೆ ಕರ್ನಾಟಕ ಹೈಕೋರ್ಟ್ ನಲ್ಲೆ ನಡೆಸುವಂತೆ ಅರ್ಜಿ ವಾಪಾಸ್ ಕಳುಹಿಸಿತು.

ಇಪ್ಪತ್ತು ವರ್ಷಗಳ ಸುದೀರ್ಘ ಹೋರಾಟ: ಸರ್ಕಾರ ಭೂಮಿ ಸ್ವಾಧೀನ ಪಡಿಸಿಕೊಂಡರೆ ಭೂಸ್ವಾಧೀನ ನಿಯಮಗಳ ಪ್ರಕಾರದ ಆ ಭಾಗದ ಭೂಮಿಯ ಎಸ್ ಆರ್ ಬೆಲೆಯ‌ ಮೂರು ಪಟ್ಟು ಹಣ ಪರಿಹಾರ ನೀಡಬೇಕಾಗುತ್ತದೆ. ಆದರೆ ಕೊಳಚೆ ನಿರ್ಮೂಲನಾ ಮಂಡಳಿ‌ಯ ಸೆಕ್ಸನ್ 20 ರ ಪ್ರಕಾರ ಪ್ರಕಾರ ಯಾವುದೇ ಜಮೀನು ಸ್ವಾಧೀನ ಪಡಿಸಿಕೊಂಡರೆ ಆ ಭೂಮಿಗೆ ಪಾವತಿಸುವ ತೆರಿಗೆಯ ಮುನ್ನೂರು ಪಟ್ಟು ಹಣ ಪರಿಹಾರ ನೀಡುತ್ತದೆ. ( ಉದಾಹರಣೆಗೆ ಒಂದು‌ ರೂಪಾಯಿ ತೆರಿಗೆ ಪಾವತಿಸಿದರೆ ಮುನ್ನೂರು ರೂಪಾಯಿ ಪರಿಹಾರ ನೀಡುವುದು) ಈ ನಿಯಮ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

1985 ರಲ್ಲೂ ಕೊಳಚೆ ನಿರ್ಮೂಲನಾ ಮಂಡಳಿ ಈ ಜಮೀನು‌ ಸ್ವಾಧೀನ ಪಡಿಸಿಕೊಂಡಾಗ ಹೈಕೋರ್ಟ್ ಅದನ್ನು ರದ್ದುಪಡಿಸಿತು. ಆ ಹಿನ್ನಲೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಅವೈಜ್ಞಾನಿಕ ಪರಿಹಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ‌ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಭೂಸ್ವಾಧೀನ ಅಧಿಸೂಚನೆಯನ್ನು ರದ್ದುಗೊಳಿಸಿ ತೀರ್ಪು ನೀಡಿದ್ದಾರೆ ಎಂದು ಟಿ ಆರ್ ಮಿಲ್ಸ್ ಮತ್ತು ಚಂದ್ರ ಸ್ಪಿನಿಂಗ್ ಎಂಡ್ ವಿವಿಂಗ್ ಮಿಲ್ಸ್ ಪ್ರೈವೆಟ್ ಲಿಮಿಟೆಡ್ ನಿರ್ದೇಶಕರಾದ ಬಾಲಚಂದರ್ ಕೃಷ್ಣಮೂರ್ತಿ ತಿಳಿಸಿದರು.

Tags:
error: Content is protected !!