Mysore
28
overcast clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

ಹೈಕೋರ್ಟ್‌ಗೆ ಎರಡು ವಾರ ಚಳಿಗಾಲದ ರಜೆ: ಜನವರಿ.5ರಿಂದ ಕಲಾಪ ಪುನಾರಂಭ

ಬೆಂಗಳೂರು: ಹೈಕೋರ್ಟ್‌ಗೆ ಡಿಸೆಂಬರ್.‌20ರಿಂದ 31ರವರೆಗೆ ಎರಡು ವಾರ ಚಳಿಗಾಲದ ರಜೆ ಇರುತ್ತದೆ. ಹೊಸ ವರ್ಷದ ಮೊದಲ ದಿನ ರಜೆ ಇರಲಿದ್ದು, ಜನವರಿ.20ರಂದು ಘೋಷಿತ ರಜೆ ನೀಡಲಾಗಿದೆ. ಶನಿವಾರ, ಭಾನುವಾರ ವಾರಾಂತ್ಯ ರಜೆ ಇದ್ದು, ಅಧಿಕೃತವಾಗಿ ಜನವರಿ.5ರಿಂದ ಹೈಕೋರ್ಟ್‌ ಕಲಾಪ ಪುನರಾರಂಭಲಾಗಲಿದೆ.

ಡಿಸೆಂಬರ್.‌23, 26 ಹಾಗೂ 30ರಂದು ರಜಾ ಕಾಲದ ನ್ಯಾಯ ಪೀಠಗಳು ಕಾರ್ಯನಿರ್ವಹಿಸಲಿದೆ. ತುರ್ತು ಪ್ರಕರಣಗಳ ವಿಚಾರಣೆ ನಡೆಸಲಾಗುವುದು. ತುರ್ತು ಆದೇಶಗಳು, ತಡೆ ಆದೇಶಗಳು, ಮಧ್ಯಂತರ ನಿರ್ದೇಶನ ಮತ್ತಿತರ ಪ್ರಕರಣಗಳ ವಿಚಾರಣೆಯನ್ನು ಮಾತ್ರ ರಜಾಕಾಲೀನ ಪೀಠಗಳು ನಡೆಸಲಿವೆ.

Tags:
error: Content is protected !!