Mysore
28
scattered clouds

Social Media

ಶನಿವಾರ, 11 ಏಪ್ರಿಲ 2026
Light
Dark

ಯಾವ ಕ್ರಾಂತಿಯೂ ನಡೆಯಲ್ಲ, ಸರ್ಕಾರ ಅಭಿವೃದ್ಧಿ ಕ್ರಾಂತಿ ಮಾಡಲಿ ಎಂದ ಎಚ್‌ಡಿಕೆ

ಬೆಂಗಳೂರು: ಹಾಸನಾಂಬೆ ದರ್ಶನದ ವೇಳೆ ಜಿಲ್ಲಾಡಳಿತದಿಂದ ಶಿಷ್ಟಾಚಾರ ಪಾಲನೆ ಮಾಡದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪ್ರೋಟೋಕಾಲ್‌ಗೆ ಅಷ್ಟು ಆದ್ಯತೆ ಕೊಡಲ್ಲ. ಸುಮ್ಮನೇ ಅಧಿಕಾರಿಗಳಿಗೆ ಯಾಕೆ ತೊಂದರೆ ಕೊಡಬೇಕು. ನಮಗೆ ದೇವಿಯ ದರ್ಶನ ಮುಖ್ಯ. ಚೆನ್ನಾಗಿ ದರ್ಶನವಾಗಿದೆ ಎಂದು ಹೇಳಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ನವೆಂಬರ್‌ ಕ್ರಾಂತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾವ ಕ್ರಾಂತಿಯೂ ನಡೆಯಲ್ಲ. ಅಭಿವೃದ್ಧಿ ಕ್ರಾಂತಿ ಮಾಡಲಿ ಎಂದು ಹೇಳಿದರು.

Tags:
error: Content is protected !!