Mysore
22
overcast clouds

Social Media

ಭಾನುವಾರ, 13 ಜುಲೈ 2025
Light
Dark

ಹಾಸನಾಂಬೆ ದರ್ಶನ ಪಡೆದ ಕೇಂದ್ರ ಸಚಿವ ಎಚ್‌ಡಿಕೆ

ಹಾಸನ: ಚನ್ನಪಟ್ಟಣ ಉಪ ಚುನಾವಣೆಯ ಪ್ರಚಾರದ ನಡುವೆಯೂ ಕುಟುಂಬ ಸಮೇತರಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಸನನಾಂಬೆಯ ದರ್ಶನವನ್ನು ಪಡೆದಿದ್ದಾರೆ.

ವರ್ಷಕ್ಕೆ ಒಂದು ಬಾರಿ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆ ದರ್ಶನ ಪಡೆಯಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ಗಣ್ಯರು ಆಗಮಿಸಿದ್ದಾರೆ. ಈ ಮಧ್ಯೆ ಇಂದು(ಅಕ್ಟೋಬರ್‌ 27) ಎಚ್‌.ಡಿ.ಕುಮಾರಸ್ವಾಮಿ ಅವರು ಕುಟುಂಬ ಸದಸ್ಯರಾದ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಸೊಸೆ ರೇವತಿಯೊಡನೆ ಆಗಮಿಸಿ ಹಾಸನಾಂಬೆ ದರ್ಶನ ಮಾಡಿಕೊಂಡಿದ್ದಾರೆ.

Tags:
error: Content is protected !!