Mysore
23
overcast clouds
Light
Dark

ಲೋಕಸಮರ 2024: ಮಂಡ್ಯ ಕ್ಷೇತ್ರದಲ್ಲಿ ಮುನ್ನಡೆ ಬಗ್ಗೆ ಎಚ್‌ಡಿಕೆ ರಿಯಾಕ್ಷನ್‌

ಬೆಂಗಳೂರು: ಇಂದು ದೇಶದ 542 ಕೇತ್ರಗಳಿಗೆ ಇಂದು ಮತ ಎಣಿಕೆ ಆರಂಭವಾಗಿದ್ದು, ಮತದಾರ ಯಾರ ಕೈಹಿಡಿಯಲಿದ್ದಾನೆ ಎಂಬುದು ಇಂದು ಸಂಜೆ ಒಳಗೆ ತಿಳಿಯಲಿದೆ.

ಇನ್ನು ರಾಜ್ಯದ ಎಲ್ಲಾ 28 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತ ಎಣಿಕೆ ನಡೆಯುತ್ತಿದೆ. ಇನ್ನು ರಾಜ್ಯದಲ್ಲಿ ಹೈವೋಲ್ಟೇಜ್‌ ಕದನ ಕಣವಾಗಿರುವ ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು 78 ಸಾವಿರ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಈ ಸಂಬಂಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮಂಡ್ಯದಲ್ಲಿ ಜನರು ಈ ಬಾರಿ ನನಗೆ ಆಶೀರ್ವಾದ ಮಾಡಲಿದ್ದಾರೆ. ಎಕ್ಸಿಟ್‌ ಪೋಲ್ಸ್‌ ಶೇ.90 ರಷ್ಟು ಸತ್ಯವಾಗಲಿದ್ದು, ಈ ಬಾರಿಯೂ ಬಿಜೆಪಿ ಅಧಿಕಾರ ಉಳಿಸಿಕೋಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಎನ್‌ಡಿಎ ಕನಿಷ್ಠ 25 ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ ಎಂದರು.

ಇನ್ನು ಎನ್‌ಡಿಎ ಅಧಿಕಾರಕ್ಕೆ ಬಂದರೇ ಕೇಂದ್ರ ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ, ಆ ಬಗ್ಗೆ ನನಗೆ ಯಾವುದೇ ಆಸಕ್ತಿಯಿಲ್ಲ. ರಾಜ್ಯಕ್ಕೆ ಏನಾಗಬೇಕೋ ಅದನ್ನು ಮಾಡುತ್ತೇನೆ, ಕ್ಷೇತ್ರದ ಜನರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಕುಮಾರಣ್ಣ ಹೇಳಿದರು.

ಇನ್ನು ಮಂಡ್ಯ ಕ್ಷೇತ್ರದಲ್ಲಿ ಬೆಳಿಗ್ಗೆ 10.05 ರ ಸಮಯಕ್ಕೆ ಎಚ್‌ ಡಿ ಕುಮಾರಸ್ವಾಮಿ 218874 ಮತ ಪಡೆದರೇ, ಸ್ಟಾರ್‌ ಚಂದ್ರು 129935 ಮತ ಪಡೆದಿದ್ದಾರೆ. ಸ್ಟಾರ್‌ ಚಂದ್ರುಗಿಂತ ಕುಮಾರಣ್ಣ 88936 ಮತಗಳ ಅಂತರದಿಂದ ಮುನ್ನಡೆ ಸಾಧಿಸುತ್ತಿದ್ದಾರೆ.