ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಎಕ್ಸ್ ನಲ್ಲಿ ಶುಭ ಕೋರಿದ್ದರು.
ದೇವೇಗೌಡಜೀ ತಾವು ರಾಷ್ಟಕ್ಕೆ ಸಲ್ಲಿಸಿದ ಸೇವೆಗಾಗಿ ರಾಜಕೀಯ ವಲಯದಲ್ಲಿ ಗೌರವ ಪಡೆದಿದ್ದೀರಿ. ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ನಿಮ್ಮ ಒಲವು ಗಮನಾರ್ಹವಾಗಿದೆ. ನಿಮಗೆ ದೀರ್ಘ ಹಾಗೂ ಆರೋಗ್ಯಕರ ಜೀವನ ದೊರೆಯಲಿ ಎಂದು ಪ್ರಾರ್ಥಿಸುವೆ ಎಂದು ತಮ್ಮ ಎಕ್ಸ್ ಮೂಲಕ ಇಂದು(ಮೇ.18) ಮೋದಿ ಶುಭ ಕೋರಿದ್ದರು.
ಈ ಶುಭ ನುಡಿಗೆ ಪ್ರತಿಕ್ರಿಯಿಸಿದ ಎಚ್.ಡಿ ದೇವೇಗೌಡರು ನನ್ನ ಜನ್ಮ ದಿನಕ್ಕೆ ಶುಭ ಕೋರಿದ ನಿಮಗೆ ಧನ್ಯವಾದಗಳು. ನಿಮ್ಮ ಉದಾರವಾದ ಮಾತುಗಳು ನನಗೆ ಸಾಂತ್ವನ ನೀಡಿದೆ. ನೀವು ಮೂರನೇ ಬಾರಿಗೆ ಪ್ರಧಾನಿಯಾಗಿ ದೇಶ ಮುನ್ನಡೆಸುವುದನ್ನು ಎದರು ನೋಡುತ್ತಿದ್ದೇನೆ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.