Mysore
29
broken clouds
Light
Dark

ಹಾಸನ: ರೌಡಿ ಶೀಟರ್‌ ಭೀಕರ ಹತ್ಯೆ; ಕೊಲೆ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಹಾಸನ: ಹಾಸನದ ನಟೋರಿಯಸ್‌ ರೌಡಿ ಶೀಟರ್‌ನ ಭೀಕರ ಹತ್ಯೆ ಇಂದು(ಜೂ.5) ಬೆಳಿಗ್ಗೆ ನಗರದ ಪೆನ್ಷನ್‌ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರೌಡಿ ಶೀಟರ್‌ ಚೈಲ್ಡ್‌ ರವಿ(೪೫) ಎಂಬಾತನೆ ಭೀಕರ ಹತ್ಯೆಗೀಡಾದ ವ್ಯಕ್ತಿ. ಇಂದು ಬೆಳಿಗ್ಗೆ 7:55 ನಿಮಿಷಕ್ಕೆ ಬಂದ ಬಿಳಿ ಬಣ್ಣದ ಸ್ಯಾಂಟ್ರೋ ಕಾರು, ಎದರು ಬರುತ್ತಿದ್ದ ರವಿಯ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಆತ ನೆಲಕ್ಕೆ ಉರುಳುತ್ತಿದ್ದಂತೆ ಹಂತಕರು ಅಟ್ಯಕ್‌ ಮಾಡಿ ಮಾರಾಕಾಸ್ತ್ರಗಳಿಂದ ಮನಸೋ ಇಚ್ಚೆ ಹೊಡೆದು ಭೀಕರ ಹತ್ಯೆ ಮಾಡಿದ್ದಾರೆ.

ಹತ್ಯೆ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆ
ಮೃತ ಚೈಲ್ಡ್‌ ರವಿ, ಮೂರು ಕೊಲೆ, ದರೋಡೆ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದ. ಇಂದು ಬೆಳಿಗ್ಗೆ ಹೊರಗೆ ಹೋದಾಗ ದಾರಿ ಮದ್ಯೆ ಅಡ್ಡಗಟ್ಟಿ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಪೆನ್ಷನ್‌ ಮೊಹಲ್ಲಾ ಪೊಲೀಸರು ಭೇಟಿ ಪರೀಶಿಲನೆ ಮಾಡಿದ್ದಾರೆ.

ಇನ್ನು ಈ ಹತ್ಯೆ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಆಧಾರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.