ಬೆಂಗಳೂರು: ಜಿಎಸ್‍ಟಿ ವಿನಾಯಿತಿ ಹಿನ್ನೆಲೆಯಲ್ಲಿ ಇಂದಿನಿಂದಲೇ ಜಾರಿಯಾಗುವಂತೆ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ.
ನಂದಿನಿ ಉತ್ಪನ್ನಗಳ ಹೊಸ ದರ ಜಾರಿಗೆ ಬಂದಿದ್ದು, ನಂದಿನಿ ಉತ್ಪನ್ನಗಳ ಬೆಲೆ ವಿವರ ಈ ಕೆಳಕಂಡಂತೆ ಇದೆ.
ಇದುವರೆಗೂ 650 ರೂ. ಇದ್ದ 1000 ಮಿಲಿಯ ತುಪ್ಪದ ಪೌಚ್ ಇಂದಿನಿಂದ 610 ರೂ.ಗಳಿಗೆ ಸಿಗಲಿದೆ. 305 ರೂ. ಇದ್ದ 500 ಮಿಲಿಯ ಉಪ್ಪು ರಹಿತ ಬೆಣ್ಣೆ ಇನ್ನು ಮುಂದೆ 286 ರೂ.ಗಳಿಗೆ ಸಿಗಲಿದೆ.
1000 ಗ್ರಾಮ್ ಪನ್ನಿರ್ ಬೆಲೆ 425 ರೂ.ಗಳಿಂದ 408 ರೂ.ಗಳಿಗೆ, ಒಂದು ಲೀಟರ್ ಗುಡ್‍ಲೈಫ್ ಹಾಲಿನ ಬೆಲೆ 70 ರಿಂದ 68 ರೂ.ಗಳಿಗೆ, 480 ರೂ. ಇದ್ದ ಒಂದು ಕೆಜಿ ಚೀಸ್ ಬೆಲೆ 450, 530 ಇದ್ದ ಸಂಸ್ಕರಿಸಿದ ಚೀಸ್ 497 ರೂ.ಗಳಿಗೆ ಇಂದಿನಿಂದ ಮಾರಾಟ ಮಾಡಲಾಗುವುದು.
1000 ಮಿಲಿಯ ವೆನಿಲ್ಲಾ ಟಬ್ ಐಸ್ ಕ್ರೀಮ್ ಬೆಲೆಯನ್ನು 200 ರಿಂದ 178 ರೂ.ಗಳಿಗೆ, ಫ್ಯಾಮಿಲಿ ಪ್ಯಾಕ್ ಐಸ್ ಕ್ರೀಂ ಬೆಲೆ 645ರಿಂದ 574ಕ್ಕೆ ಇಳಿಕೆಯಾಗಿದೆ.
500 ಮಿಲಿಯ ಐಸ್ ಕ್ರೀಮ್ ಚಾಕೊಲೇಟ್ ಸಂಡೇ ದರವನ್ನು 115ರಿಂದ 102ಕ್ಕೆ, 100 ಗ್ರಾಮ್ ಮ್ಯಾಂಗೋ ನ್ಯಾಚುರಲ್ ಐಸ್ ಬೆಲೆಯನ್ನು 35 ರಿಂದ 31ರೂ.ಗಳಿಗೆ ನೀಡಲಾಗುವುದು.





