Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಸರ್ಕಾರಿ ಶಾಲೆ ದುಸ್ಥಿತಿ | ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪೋಸ್ಟ್‌ ; ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು

BJP post on social media

ಹನೂರು : ತಾಲೂಕಿನ ಕೂಡ್ಲೂರು ಕ್ಲಸ್ಟರ್ ಅಂಚಿಪಾಳ್ಯ ಶಾಲೆಯ ದುಸ್ಥಿತಿಯ ಬಗ್ಗೆ ಬಿಜೆಪಿ ಕರ್ನಾಟಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಇದೆಂತ ಪರಿಸ್ಥಿತಿ ಬಂತು ನಮ್ಮ ರಾಜ್ಯಕ್ಕೆ! ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರಲ್ಲಿ ಮನುಷ್ಯತ್ವ ಎನ್ನುವುದೇ ಇಲ್ಲವಾಗಿದೆ ಸರ್ಕಾರಿ ಶಾಲೆಗಳು ಯಾವ ರೀತಿಯಲ್ಲಿ ಅದೋಗತಿಯಲ್ಲಿದೆ ಎನ್ನುವುದು ಅರಿವಾಗುತ್ತಿದೆ.

ಇದನ್ನೂ ಓದಿ: ಕಲಿಯುಗ ಕೃಷ್ಣನ ‘ಮಿಡಲ್ ಕ್ಲಾಸ್ ರಾಮಾಯಣ’; ಟ್ರೇಲರ್ ಬಿಡುಗಡೆ

ಮುಖ್ಯಮಂತ್ರಿಗಳೇ ಈ ವಿಚಾರವಾಗಿ ಸಂಬಂಧಿತ ಶಾಲೆಯ ಶಿಕ್ಷಕರ ಮುಖ್ಯ ಶಿಕ್ಷಕರ ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಬಿಟ್ಟು ನೇರವಾಗಿ ಶಿಕ್ಷಣ ಸಚಿವರ ವಿರುದ್ಧವೇ ಕ್ರಮ ಕೈಗೊಳ್ಳಿ. ಸರ್ಕಾರಿ ಶಾಲೆಗಳ ದುಸ್ಥಿತಿಗೆ ಮಧು ಬಂಗಾರಪ್ಪ ಅವರ ರಾಜೀನಾಮೆಯೊಂದೆ ಪರಿಹಾರ.

ಕಾಂಗ್ರೆಸ್ ವಿಫಲ ಕರ್ನಾಟಕ
ಸರ್ಕಾರಿ ಶಾಲೆಗಳ ಅವ್ಯವಸ್ಥೆಯಿಂದ ಮಕ್ಕಳು ಪರದಾಡುತ್ತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಶಿಕ್ಷಣ ಸಚಿವ ಮಧು ಬಂಗಾರಪ್ಪನವರೆ ಕಣ್ತೆರೆಯಿರಿ ಎಂದು ಮಕ್ಕಳು ಮೂಲಭೂತ ಸೌಲಭ್ಯ ಕಲ್ಪಿಸಿಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇನ್ನು ಈ ಪೋಸ್ಟ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವೊಬ್ಬರು ಕಾಮೆಂಟ್‌ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವರು, ಕಾಂಗ್ರೆಸ್ ಹಾಗೂ ಬಿಜೆಪಿ ಬಿಜೆಪಿ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Tags:
error: Content is protected !!