ಬೆಂಗಳೂರು: ರೈತರಿಗೆ ದೀಪಾವಳಿ ಹೊತ್ತಿನಲ್ಲಿ ಪರಿಹಾರದ ಸಿಹಿ ಸುದ್ದಿ. ಈ ಹಿಂದೆ ₹2,500 ಇದ್ದ ಬರ ಪರಿಹಾರವನ್ನು ಒಟ್ಟು ₹5,000ಕ್ಕೆ ಹೆಚ್ಚಿಸುವುದಾಗಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಯಾದಗಿರಿ ಜಿಲ್ಲೆಯ ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವ ಮೂಲಕ ಪರಿಹಾರ ವಿತರಣೆಗೆ ಚಾಲನೆ ನೀಡಲಾಗಿದೆ.
ಮೊದಲ ಹಂತದಲ್ಲಿ ರೈತರ ಖಾತೆಗೆ ₹2,500 ಜಮೆ ಮಾಡಲಾಗುತ್ತಿದ್ದು, ದೀಪಾವಳಿ ಮುಗಿದ ಬಳಿಕ ಮತ್ತೊಂದು ಕಂತಿನಲ್ಲಿ ₹2,500 ನೀಡುವುದಾಗಿ ಅವರು ತಿಳಿಸಿದ್ದಾರೆ. ಈ ಮೂಲಕ ಪ್ರತಿ ರೈತನಿಗೆ ಒಟ್ಟು ₹5,000 ಪರಿಹಾರ ದೊರೆಯಲಿದೆ.
ಪರಿಹಾರ ವಿತರಣೆಗೆ ₹1,250 ಕೋಟಿ ಹಣ ನೀಡುತ್ತಿರುವುದಾಗಿ ಹೇಳಿರುವ ಡಿಕೆ ಶಿವಕುಮಾರ್, ಡಿಬಿಟಿ ಮೂಲಕ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ತಲುಪಲಿದೆ ಎಂದು ತಿಳಿಸಿದ್ದಾರೆ.




