Mysore
28
scattered clouds

Social Media

ಗುರುವಾರ, 05 ನವೆಂಬರ್ 2026
Light
Dark

ದೇವೀರಮ್ಮನ ಜಾತ್ರೆಗೆ ಹೊಸ ನಿಯಮ — ರಾತ್ರಿ ಬೆಟ್ಟ ಹತ್ತಲು ನಿಷೇಧ, ಎರಡು ದಿನ ಭಕ್ತರಿಗೆ ಅವಕಾಶ!

ಚಿಕ್ಕಮಗಳೂರು: ಕಾಫಿನಾಡಿನ ಶಕ್ತಿದೇವತೆ ಬಿಂಡಿಗ ದೇವೀರಮ್ಮನ ದರ್ಶನಕ್ಕೆ ತೆರಳುವ ಭಕ್ತರೇ ಗಮನಿಸಿ… ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ರಾತ್ರಿ ವೇಳೆ ಬೆಟ್ಟ ಹತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಬಿಂಡಿಗ–ಮಲ್ಲೇನಹಳ್ಳಿ ಗ್ರಾಮದ ದೇವೀರಮ್ಮನ ಜಾತ್ರೆಗೆ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲಾಡಳಿತ, ವಿವಿಧ ಇಲಾಖೆಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುತ್ತಿವೆ.

ಕಿರಿದಾದ, ದುರ್ಗಮ ಹಾದಿಯ ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವೀರಮ್ಮನ ದರ್ಶನಕ್ಕೆ ಪ್ರತಿವರ್ಷ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ವರ್ಷಕ್ಕೊಮ್ಮೆ ದೊರೆಯುವ ದೇವಿಯ ದರ್ಶನಕ್ಕಾಗಿ ದೂರದ ಊರುಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಈ ಬಾರಿ ಎರಡು ದಿನಗಳ ಕಾಲ ಬೆಟ್ಟ ಹತ್ತಲು ಅವಕಾಶ ಕಲ್ಪಿಸಲಾಗಿದೆ. ಆದರೆ ರಾತ್ರಿ ವೇಳೆ ಬೆಟ್ಟ ಹತ್ತಲು ಅವಕಾಶ ಇರುವುದಿಲ್ಲ.

ದೇವೀರಮ್ಮನ ದರ್ಶನಕ್ಕೆ ತೆರಳುವ ಭಕ್ತರು ಜಿಲ್ಲಾಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ನಿಗದಿಪಡಿಸುವ ಸಮಯ ಮತ್ತು ಸೂಚನೆಗಳನ್ನು ಗಮನಿಸಿ ಪ್ರಯಾಣ ಬೆಳೆಸಿ.

Tags:
error: Content is protected !!