Mysore
17
broken clouds

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ಬಿಸಿಯೂಟ ಸಿಬ್ಬಂದಿಗೆ ಸಿಹಿ ಸುದ್ದಿ : ಗೌರವಧನ ಹೆಚ್ಚಳ

school food

ಬೆಂಗಳೂರು : ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಡುಗೆ ತಯಾರಕರು ಮತ್ತು ಸಹಾಯಕರ ಗೌರವಧನವನ್ನು ಹೆಚ್ಚಳ ಮಾಡಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಗೌರವಧನವನ್ನು ತಿಂಗಳಿಗೆ ರೂ.1000 ಹೆಚ್ಚಳ ಮಾಡಿದ್ದು, ಕ್ಷೀರಭಾಗ್ಯ ಲೆಕ್ಕಶೀರ್ಷಿಕೆ ಅಡಿ ಈ ಮೊತ್ತವನ್ನು ಭರಿಸಲಾಗುವುದೆಂದು ಹೇಳಲಾಗಿದೆ.

ಗೌರವಧನ ಹೆಚ್ಚಳ ಮಾಡುವುದಾಗಿ 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಅದರಂತೆ ಇದೀಗ ಕ್ರಮವಹಿಸಲಾಗಿದೆ. ಪ್ರಸ್ತುತ ಅಡುಗೆ ತಯಾರಕರು ರೂ.3700 ಹಾಗೂ ಸಹಾಯಕರು ರೂ.3600 ಸಂಭಾವನೆ ಪಡೆಯುತ್ತಿದ್ದು, ಕ್ರಮವಾಗಿ ರೂ.4700 ಹಾಗೂ ರೂ.4600ಕ್ಕೆ ಹೆಚ್ಚಳವಾಗಲಿದೆ.

Tags:
error: Content is protected !!