Mysore
24
clear sky

Social Media

ಬುಧವಾರ, 17 ಡಿಸೆಂಬರ್ 2025
Light
Dark

ರೈತರಿಗೆ ಸಿಹಿ ಸುದ್ದಿ ; ಕೊಬ್ಬರಿಗೆ ಬೆಂಬಲ ಬೆಲೆ

ಬೆಂಗಳೂರು : ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ೨೦೨೬ರ ಹಂಗಾಮಿನ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಅನುಮೋದನೆ ನೀಡಿದ್ದು, ರಾಜ್ಯದ ರೈತರಿಗೆ ಮತ್ತೊಮೆ ಸಿಹಿ ಸುದ್ದಿ ನೀಡಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದ ತೆಂಗು ಬೆಳೆಗಾರರಿಗೆ ಮೋದಿ ಸರ್ಕಾರವು ಹೊಸವರ್ಷದ ಕೊಡುಗೆಯಾಗಿ ಕೊಬ್ಬರಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದೆ ಎಂದು ಹೇಳಿದ್ದಾರೆ.

ಕೇಂದ್ರದ ಈ ನಿರ್ಧಾರದಿಂದಾಗಿ ರಾಜ್ಯದ ತೆಂಗು ಬೆಳೆಗಾರರಿಗೆ ಹೆಚ್ಚಿನ ಲಾಭ ದೊರೆಯಲಿದ್ದು, ಹೋಳು ಕೊಬ್ಬರಿ ಮತ್ತು ಉಂಡೆ ಕೊಬ್ಬರಿ ಎರಡರ ದರದಲ್ಲೂ ಗಮನಾರ್ಹ ಏರಿಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೋಳು ಕೊಬ್ಬರಿಗೆ ೪೪೫ ರೂ., ಉಂಡೆ ಕೊಬ್ಬರಿಗೆ ೪೦೦ ರೂ. ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:-ಮಾಗಿ ಚಳಿಯ ಅಬ್ಬರಕ್ಕೆ ರಾಜ್ಯದ ಜನತೆ ಕಕ್ಕಾಬಿಕ್ಕಿ

ಹೋಳು ಕೊಬ್ಬರಿ ಕ್ವಿಂಟಾಲ್‌ಗೆ ೨೦೨೫ರಲ್ಲಿ ೧೧,೫೮೨ ರೂ. ಇದ್ದ ದರವು ೨೦೨೬ಕ್ಕೆ ೧೨,೦೨೭ ರೂ.ಗೆ ಏರಿಕೆಯಾಗಲಿದೆ. ಒಟ್ಟು ೪೪೫ ರೂ. ಹೆಚ್ಚಳವಾಗಿದೆ ಎಂದು ಹೇಳಿರುವ ಅವರು, ಉಂಡೆ ಕೊಬ್ಬರಿ ಪ್ರತಿ ಕ್ವಿಂಟಾಲ್‌ಗೆ ಪ್ರಸ್ತುತ ೧೨,೧೦೦ ರೂ. ಇದ್ದು ೨೦೨೬ಕ್ಕೆ ೧೨,೫೦೦ ರೂ. ಏರಿಕೆಯಾಗಲಿದ್ದು, ಒಟ್ಟು ೪೦೦ ರೂ. ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.

೨೦೧೪ರಿಂದ ಕೇಂದ್ರ ಸರ್ಕಾರವು ಮಿಲ್ಲಿಂಗ್ ಕೊಬ್ಬರಿಯ ಎಂಎಸ್‌ಪಿಯನ್ನು ಗಣನೀಯವಾಗಿ ಹೆಚ್ಚಿಸುತ್ತಾ ಬಂದಿದ್ದು, ೨೦೧೪ರ ಮಾರುಕಟ್ಟೆ ಋತುವಿನಲ್ಲಿ ಕ್ವಿಂಟಲ್‌ಗೆ ಎಂಎಸ್‌ಪಿ ೫,೨೫೦ ರೂ. ಇತ್ತು. ಕಳೆದ ೧೦ ವರ್ಷಗಳಲ್ಲಿ ಶೇ.೧೨೯ರಷ್ಟು ಜಾಸ್ತಿ ಆಗಿದೆ. ಅದೇ ರೀತಿ ಉಂಡೆ ಕೊಬ್ಬರಿಯ ಬೆಲೆಯು ಕ್ವಿಂಟಲ್‌ಗೆ ೫,೫೦೦ ರೂ.ನಿಂದ ೧೨,೫೦೦ ರೂ.ಗೆ ಏರಿಕೆಯಾಗಿದ್ದು, ಶೇ.೧೨೭ ರಷ್ಟು ಹೆಚ್ಚಳವಾಗಿದೆ ಎಂದು ಅವರು ವಿವರಿಸಿದ್ದಾರೆ.

Tags:
error: Content is protected !!