Mysore
19
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಕ್ವಾಂಟಮ್ ತಂತ್ರಜ್ಞಾನದಲ್ಲಿ ಕರ್ನಾಟಕ ರಾಜ್ಯವನ್ನು ಮುಂಚೂಣಿಯಲ್ಲಿರಿಸುವ ಗುರಿ : ಸಚಿವ ಎನ್‌ ಎಸ್‌ ಭೋಸರಾಜು

Goal to make Karnataka a leader in quantum technology: Minister N. S. Boseraju

ಬೆಂಗಳೂರು : ಕರ್ನಾಟಕ ರಾಜ್ಯವನ್ನು ಕ್ವಾಂಟಮ್ ತಂತ್ರಜ್ಞಾನದಲ್ಲಿ ಜಾಗತಿಕ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದರು.

ಇಂದು ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವ QpiAI ಸಂಸ್ಥೆಯ ಕಾರ್ಲೆ ಟೌನ್ SEZ (Karle Town SEZ) ಆಫೀಸ್‌ಗೆ ಭೇಟಿ ನೀಡಿ, ಭಾರತದಲ್ಲಿ ನಿರ್ಮಿತವಾದ ಅತ್ಯಾಧುನಿಕ ಕ್ವಾಂಟಮ್ ಕಂಪ್ಯೂಟರ್ – QpiAI Indus ಅನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ತಜ್ಞರು ಮಾಡಿದ ಡೆಮೊನ್ಸ್ಟ್ರೇಷನ್‌ನಲ್ಲಿ QpiAI Indus ನ ತಂತ್ರಜ್ಞಾನ ಸಾಮರ್ಥ್ಯಗಳನ್ನು ವಿವರಿಸಿದರು. ಇದು ಭಾರತೀಯ ಕ್ವಾಂಟಮ್ ಸಂಶೋಧನೆಯಲ್ಲಿನ ಮಹತ್ವದ ಹೆಜ್ಜೆಯಾಗಿದ್ದು, ಆರೋಗ್ಯ, ಹಣಕಾಸು, ರಾಷ್ಟ್ರದ ಭದ್ರತೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಅಪಾರವಾಗಿ ಬಳಸಬಹುದಾದ ತಂತ್ರಜ್ಞಾನವಾಗಿದೆ ಎಂದು ತಿಳಿಸಿದರು.

ಭೇಟಿಯ ನಂತರ ಸಚಿವ ಎನ್‌ ಎಸ್‌ ಭೋಸರಾಜು ಮಾತನಾಡಿ, “ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ ಕ್ವಾಂಟಮ್ ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ರಾಷ್ಟ್ರದ ಕೇಂದ್ರ ಬಿಂದುವಾಗಿ ರೂಪಿಸುವ ನಿಟ್ಟಿನಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಕ್ವಾಂಟಮ್ ತಂತ್ರಜ್ಞಾನವು ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿಯತ್ತ ನಡೆಸುತ್ತಿದೆ. ಕ್ವಾಂಟಮ್ ಕಂಪ್ಯೂಟರ್ ಮಾತ್ರವಲ್ಲದೆ, ಕ್ವಾಂಟಮ್ ಸುರಕ್ಷಿತ ಸೈಬರ್ ತಂತ್ರಜ್ಞಾನ, ಕ್ವಾಂಟಮ್ ಇಮೇಜಿಂಗ್, ಹಾಗೂ ಕ್ವಾಂಟಮ್ ನೆಟ್‌ವರ್ಕಿಂಗ್ ಎಲ್ಲವೂ ಭವಿಷ್ಯದ ತಂತ್ರಜ್ಞಾನದ ಮೂಲಭೂತ ಅಂಶಗಳಾಗಿವೆ. ಇದನ್ನು ಮುಂಚಿತವಾಗಿ ಅಳವಡಿಸಿಕೊಂಡ ರಾಷ್ಟ್ರಗಳು ಮತ್ತು ರಾಜ್ಯಗಳು ತಾಂತ್ರಿಕ ಮತ್ತು ಆರ್ಥಿಕವಾಗಿ ಮುಂಚೂಣಿಗೆ ಬರಲಿವೆ.”

“ಬೆಂಗಳೂರು ಭಾರತದ ನವೀನತೆಯ ರಾಜಧಾನಿಯಾಗಿದ್ದು, ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಎಲ್ಲ ರೀತಿಯ ಪೂರಕ ಸೌಕರ್ಯಗಳನ್ನು ಹೊಂದಿದೆ. ಇಲ್ಲಿ ಶ್ರೇಷ್ಟ ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕಾ ಪಾಠಶಾಲೆಗಳು, ನಿಪುಣ ತಂತ್ರಜ್ಞಾನ ಸಿಬ್ಬಂದಿ ಹಾಗೂ ತಂತ್ರಜ್ಞಾನ ಸ್ನೇಹಿ ಮೂಲಸೌಕರ್ಯಗಳು ಲಭ್ಯವಿರುವುದರಿಂದ ಬೆಂಗಳೂರನ್ನು ಕ್ವಾಂಟಮ್ ತಂತ್ರಜ್ಞಾನದ ಕೇಂದ್ರೀಯ ತಾಣವನ್ನಾಗಿ ರೂಪಿಸುವ ಉದ್ದೇಶ ನಮ್ಮದು. ಈ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಕ್ವಾಂಟಮ್‌ ಇಂಡಿಯಾ ಬೆಂಗಳೂರು ಸಮಾವೇಶವನ್ನು ಆಯೋಜಿಸುತ್ತಿದ್ದೇವೆ”

ಈ ಭೇಟಿಯ ಸಮಯದಲ್ಲಿ QpiAI ಸಂಸ್ಥೆಯ ಪ್ರತಿನಿಧಿಗಳು ತಾವು ಕರ್ನಾಟಕದಲ್ಲಿ ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಸದುದ್ದೇಶದಿಂದ ಕೆಲಸ ಮಾಡುತ್ತಿರುವುದನ್ನು ವಿವರಿಸಿದರು. ಸಂಸ್ಥೆ ಸಂಶೋಧನೆ, ಪ್ರತಿಭೆ ಮತ್ತು ಸಹಯೋಗದ ಆಧಾರದ ಮೇಲೆ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಕ್ವಾಂಟಮ್ ಉನ್ನತಿಯನ್ನು ತಲುಪಿಸಬೇಕೆಂಬ ಗುರಿ ಹೊಂದಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಕೆಸ್ಟೆಪ್ಸ್‌ ನಿರ್ದೇಶಕರಾದ ಸದಾಶಿವ ಪ್ರಭು, ಕ್ಯೂಪೈ ಸಂಸ್ಥಾಪಕರಾದ ನಾಗೇಂದ್ರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!