Mysore
18
overcast clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಗಣಪ ಸಿನಿಮಾ ಖ್ಯಾತಿಯ ನಟ ಸಂತೋಷ್‌ ಬಾಲರಾಜ್‌ ನಿಧನ

ಬೆಂಗಳೂರು: ಗಣಪ ಸಿನಿಮಾ ಖ್ಯಾತಿಯ ಕನ್ನಡ ಚಿತ್ರರಂಗದ ನಟ ಸಂತೋಷ್‌ ಬಾಲರಾಜ್‌ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಜಾಂಡೀಸ್‌ನಿಂದ ಬಳಲುತ್ತಿದ್ದ ಸಂತೋಷ್‌ ಬಾಲರಾಜ್‌ ಅವರ ಸ್ಥಿತಿ ತೀವ್ರ ಗಂಭೀರವಾಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕರಿಯಾ ಸಿನಿಮಾ ನಿರ್ಮಾಪಕ ಆನೇಕಲ್‌ ಬಾಲರಾಜ್‌ ಅವರ ಪುತ್ರ ನಟ ಸಂತೋಷ್‌ ಬಾಲರಾಜ್‌ ಅವರು ಕಳೆದ ಕೆಲ ದಿನಗಳಿಂದ ಜಾಂಡೀಸ್‌ನಿಂದ ಬಳಲುತ್ತಿದ್ದರು.

ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

Tags:
error: Content is protected !!