ಬೆಂಗಳೂರು: ನಾಳೆಯಿಂದ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಪ್ರಾರಂಭ ಆಗಲಿದ್ದು, ಎಲ್ಲಾ ಸಿದ್ಧತೆಗಳು ಮುಗಿದಿವೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ಆರತಿಗೆ ಸದ್ಯ ಶಾಶ್ವತ ವ್ಯವಸ್ಥೆ ಮಾಡಿಲ್ಲ. ಇರುವ ಜಾಗದಲ್ಲೇ ಕಾವೇರಿ ಆರತಿ ನಾಳೆಯಿಂದ ಮಾಡುತ್ತಿದ್ದೇವೆ. ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ಕೊಡುತ್ತಾರೆ. ಶಾಶ್ವತವಾಗಿ ಜಾಗ ಗುರುತು ಮಾಡಿಲ್ಲ. ಕೋರ್ಟ್‌ನಲ್ಲಿ ಕೇಸ್ ಇದೆ. ಅದು ಮುಗಿದ ಮೇಲೆ ಶಾಶ್ವತ ವ್ಯವಸ್ಥೆ ಮಾಡುತ್ತೇವೆ. ಈಗ ಇರುವ ಉತ್ತಮ ಜಾಗದಲ್ಲಿ ಮಾಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : ಅಕ್ಟೋಬರ್.17ರಂದು ಕಾವೇರಿ ತೀರ್ಥೋದ್ಭವ: ತೀರ್ಥಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ
ಇನ್ನು ನಿತ್ಯ ಒಂದೊಂದು ತಾಲ್ಲೂಕು ಜನರಿಗೆ ಬರೋದಕ್ಕೆ ಹೇಳಿದ್ದೇವೆ. ನಾಳೆ ಮೂರು ತಾಲ್ಲೂಕು ಜನರಿಗೆ ಆಹ್ವಾನ ನೀಡಲಾಗಿದೆ. ನಾವು ಹಿಂದುತ್ವ ವಿರೋಧ ಅಲ್ಲ. ಧಾರ್ಮಿಕ ವಿಚಾರಕ್ಕೂ ನಾವು ವಿರೋಧ ಮಾಡಿಲ್ಲ. ಚಪಲಕ್ಕೆ ಕೆಲವರು ಮಾತನಾಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಇನ್ನು ಕಾವೇರಿ ಆರತಿಗೆ ಪ್ರತಿ ದಿನ ಒಂದೊಂದು ತಾಲ್ಲೂಕಿನ ಜನರಿಗೆ ಆಹ್ವಾನ ನೀಡಲಾಗುತ್ತದೆ ಎಂದು ಹೇಳಿದರು.





