Mysore
29
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಅಂಧರಿಗೆ ಸರ್ಕಾರದಿಂದ ಗುಡ್‌ನ್ಯೂಸ್:‌ ಏನದು ಗೊತ್ತಾ?

ಬೆಂಗಳೂರು: ಅಂಧತ್ವ ಹೊಂದಿರುವ ವಿಶೇಷ ಚೇತನರಿಗಾಗಿ ಸರ್ಕಾರ ಗುಡ್‌ನ್ಯೂಸ್‌ ನೀಡಿದ್ದು, 4 ನಿಗಮಗಳಲ್ಲಿ ಉಚಿತವಾಗಿ ಓಡಾಡಲು ಅವಕಾಶ ಮಾಡಿಕೊಟ್ಟಿದೆ.

ಈ ಮೂಲಕ ಮಹಿಳೆಯರಿಗೆ ಯೋಜನೆ ಫ್ರೀ ಮಾಡಿದ್ದ ಸರ್ಕಾರ, ಈಗ ಅಂಧತ್ವ ಹೊಂದಿರುವ ವಿಶೇಷ ಚೇತನರಿಗಾಗಿ ಮಹತ್ವದ ಆದೇಶ ಹೊರಡಿಸಿದೆ. ಈ ಯೋಜನೆಯಿಂದ ಅಂಧರು ರಾಜ್ಯವ್ಯಾಪಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಿದೆ.

ಯಾವುದಾದರೂ ಒಂದು ನಿಗಮದ ಪಾಸ್‌ ಇದ್ದರೆ, 4 ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಸಂಚಾರ ಮಾಡಬಹುದು. ಸದ್ಯ ಈ ಬಗ್ಗೆ ಖುದ್ದು ಸಾರಿಗೆ ಸಚಿವರೇ ನಿಗಮಗಳಿಗೆ ಸೂಚಿಸಿದ್ದು, ಈ ಕ್ರಮಕ್ಕೆ ಆದೇಶಿಸಿದ್ದಾರೆ.

ಬೆಂಗಳೂರು ಒಂದರಲ್ಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಅಂಧರಿದ್ದಾರೆ. ರಾಜ್ಯವ್ಯಾಪಿ ಲಕ್ಷದಷ್ಟು ಅಂಧ ವಿಶೇಷ ಚೇತನರಿದ್ದು, ಎಲ್ಲರಿಗೂ ಸರ್ಕಾರ ಉಚಿತ ಪಾಸ್‌ ನೀಡುತ್ತಿದೆ.

Tags:
error: Content is protected !!