ಬೆಂಗಳೂರು: ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶಿ ಹಣ ಬಳಕೆ ಮಾಡಲಾಗಿದೆ ಎಂದು ಶಾಸಕ ಭರತ್ ಶೆಟ್ಟಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶಿ ಹಣ ಬಳಕೆ ಆಗಿದೆ ಎಂಬ ಬಗ್ಗೆ ನಮಗೆ ಬಲ್ಲ ಮೂಲಗಳಿಂದ ಮಾಹಿತಿ ಬಂದಿದೆ.
ಇಡಿ ಅಥವಾ ಎನ್‌ಐಎ ತನಿಖೆಯಾದರೆ ಯಾರೆಲ್ಲಾ ಖಾತೆಗಳಿಗೆ ಎಲ್ಲಿಂದ ಹಣ ಎಷ್ಟು ಬಂದಿದೆ ಎಂದು ಗೊತ್ತಾಗಲಿದೆ. ಈಗಾಗಲೇ ಷಡ್ಯಂತ್ರ ನಡೆದಿದೆ ಎಂಬ ಬಗ್ಗೆ ನಾವೂ ಹೇಳುತ್ತಿದ್ದೇವೆ. ಕಾಂಗ್ರೆಸ್‌ನವರೂ ಹೇಳುತ್ತಿದ್ದಾರೆ. ಹಾಗಾಗಿ ಇಡಿ ಅಥವಾ ಎನ್‌ಐಎ ತನಿಖೆಗೆ ಕೊಡಲಿ ಎಂದು ಆಗ್ರಹಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸೌಜನ್ಯ ಪ್ರಕರಣದಲ್ಲೂ ನ್ಯಾಯ ಸಿಗಬೇಕು. ಕೆಲವರು ಸೌಜನ್ಯ ಹತ್ಯೆ ಬಗ್ಗೆ ದಾಖಲೆ ಇದೆ. ಈ ಬಗ್ಗೆ ಹೇಳುವವರೆಲ್ಲಾ ಎಸ್‌ಐಟಿಗೆ ಆ ದಾಖಲೆಗಳನ್ನು ಕೊಡಲಿ. ಎಸ್‌ಐಟಿ ಅವರಿಗೆ ಸೌಜನ್ಯ ಕೇಸ್ ತನಿಖೆ ಮಾಡಲು ಅವಕಾಶ ಇದ್ದರೆ, ತನಿಖೆ ಮಾಡಲಿ ಎಂದು ಹೇಳಿದರು.





