ಬೆಂಗಳೂರು : 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದ ಎಂ.ಎಸ್. ಉಮೇಶ್ ಅವರು ಕೊನೆಯುಸಿರು ಎಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದಾರೆ. ಹಲವು ದಿನಗಳಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಮೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 8:30ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದೀಗ ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಇದನ್ನು ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಯುವಕ ; ಮನನೊಂದ 22 ವರ್ಷದ ಯವತಿ ಆತ್ಮಹತ್ಯೆ
ಅಭಿಮಾನಿಗಳು, ಆಪ್ತರು ಮತ್ತು ಚಿತ್ರರಂಗದವರು ಅಂತಿಮ ದರ್ಶನ ಪಡೆದರು. 1960ರಿಂದಲೂ ಚಿತ್ರರಂಗದಲ್ಲಿ ಉಮೇಶ್ ಅವರು ಸಕ್ರಿಯರಾಗಿದ್ದರು. ಅವರ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಂಡು ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.
ಉಮೇಶ್ ಪತ್ನಿ ಸುಧಾ ಅವರು ಈಗ ಪತಿಯ ಬಗ್ಗೆ ಮಾತನಾಡಿದ್ದಾರೆ. ಮದುವೆ ಆಗಿದ್ದಾಗಿನಿಂದಲೂ ತುಂಬಾ ಪ್ರೀತಿಯಿಂದ ಇದ್ದೆವು. ಯಾವತ್ತು ನಾವು ಜಗಳ ಆಡಿಲ್ಲ. ನನ್ನ ಮಗನು ಹೊರಟು ಹೋಗಿದ್ದಾನೆ. ಈಗ ನನ್ನ ಮಗಳು ಮಾತ್ರ ಇದ್ದಾಳೆ. ನಮಗೆ ಬೇರೆ ಯಾರು ಇಲ್ಲ ಎಂದಿದ್ದಾರೆ.




