Mysore
28
overcast clouds

Social Media

ಗುರುವಾರ, 06 ಆಗಸ್ಟ್ 2026
Light
Dark

ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಹೋಗುತ್ತೆ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ

ಬೆಳಗಾವಿ: ಬಿಜೆಪಿ ಪಕ್ಷದ ಈಗಿನ ಸ್ಥಿತಿ ನೋಡಿದ್ರೆ ದುಃಖ ಆಗುತ್ತೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾನೇ ಕಟ್ಟಿ ಬೆಳೆಸಿದ್ದೇನೆ ಎಂಬ ಅಹಂಕಾರ ನನ್ನಲ್ಲಿ ಇಲ್ಲ. ನನ್ನಂತೆ ಸಾಕಷ್ಟು ಹಿರಿಯರು ತಪಸ್ಸು ಮಾಡಿ ಬಿಜೆಪಿ ಪಕ್ಷ ಕಟ್ಟಿದ್ದಾರೆ. ಈಗಿನ ಪರಿಸ್ಥಿತಿ ನೋಡಿದ್ರೆ ಅವರಿಗೆಲ್ಲ ಬೇಸರ ಇದೆ. ನೋವು ಕೂಡ ಇದೆ. ಆ ನೋವು ಯಾರ ಹತ್ತಿರ ಹೇಳಿಕೊಳ್ಳಬೇಕು ಎಂಬ ಗೊಂದಲ ಇದೆ. ಬಿಜೆಪಿ ನನ್ನ ತಾಯಿ, ಮೊದಲಿನಂತೆ ಪಕ್ಷದ ಸಿದ್ಧಾಂತದ ಪ್ರಕಾರ ಎಲ್ಲವೂ ಸರಿ ನಡೆದರೆ ಪಕ್ಷಕ್ಕೆ ಬರುವೆ ಎಂದರು.

ಇನ್ನು ಬಿಜೆಪಿ ಮನೆಯೊಂದು ಆರು ಬಾಗಿಲು ಎಂಬ ಎಂಬ ಕಾಂಗ್ರೆಸ್‌ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಒಂದೇ ಇದೆ. ಅದೇ ಕಾಂಗ್ರೆಸ್‌ ಎಷ್ಟು ಇದೆ ಎಂದರೆ ನೂರಾರು ಇದೆ. ದೇಶದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಒಂದೇ ಬಾಗಿಲು ಇದೆಯಾ? ಅವರ ಪಕ್ಷದ ಬಾಗಿಲುಗಳನ್ನು ಲೆಕ್ಕ ಹಾಕಲಿ ಎಂದು ತಿರುಗೇಟು ನೀಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಬಿಜೆಪಿ ತಂದೆ-ಮಕ್ಕಳ ಪಕ್ಷ ಆಗಿದೆ. ಇದನ್ನು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಅದು ಪಕ್ಷದ ಆಂತರಿಕ ವಿಚಾರ ಅವರೇ ತೀರ್ಮಾನ ಮಾಡಲಿ ಎಂದು ಹೇಳಿದರು.

Tags:
error: Content is protected !!