Mysore
24
overcast clouds

Social Media

ಶುಕ್ರವಾರ, 18 ಏಪ್ರಿಲ 2025
Light
Dark

ದೇವರಾಜೇಗೌಡ ಹೇಳಿರುವುದೆಲ್ಲಾ ಸುಳ್ಳಿನ ಕಂತೆ : ಡಿ.ಕೆ.ಶಿವಕುಮಾರ್‌

ಬೆಂಗಳೂರು : ಬಿಜೆಪಿ ಮುಖಂಡ ದೇವರಾಜೇಗೌಡ ಮಾಡಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದದ್ದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
ದೇವರಾಜೇಗೌಡ ಡಿಕೆಶಿ ಮೇಲೆ ಮಾಡಿರುವ ಆರೋಪಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವೀಡಿಯೋ ಮೂಲಕ ಹಂಚಿಕೊಂಡಿರುವ ಅವರು, ಬಿಜೆಪಿ ಮುಖಂಡ ದೇವರಾಜೇಗೌಡ ಸುದದಿಗೋಷ್ಠಿಯಲ್ಲಿ ಹೇಳಿರುವ ವಿಚಾರವೆಲ್ಲವೂ ಸತ್ಯಕ್ಕೆ ದೂವಾದ ವಿಚಾರಗಳು ಎಂದು ಹೇಳಿದ್ದಾರೆ.

ದೇವರಾಜೇಗೌಡ ಹೇಳಿರುವ ವಿಚಾರವೆಲ್ಲವೂ ಸುಳ್ಳಿನ ಕಂತೆ. ಹಾಸನದ ಪೆನ್‌ಡ್ರೈವ್‌ ವಿಚಾರ ಹಾಗೂ ಬಿಜೆಪಿಯ ಆಂತರಿಕ ವಿಚಾರಗಳೆಲ್ಲವನ್ನು ನನಗೆ ತಿಳಿಸುತ್ತೇನೆ ಎಂದು ದೇವರಾಜೇಗೌಡ ಹೇಳದ್ದ. ಆದರೆ ನನಗೆ ಸಮಯ ಇಲ್ಲದ ಕಾರಣ ಅವನನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ ಎಂದರು.

ದೇವರಾಜೇಗೌಡನಿಗು ನನಗು ಯಾವುದೇ ಸಂಬಂಧವಿಲ್ಲ. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸೇರಿ ಈರೀತಿಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Tags: