Mysore
23
clear sky

Social Media

ಸೋಮವಾರ, 20 ಏಪ್ರಿಲ 2026
Light
Dark

ವಿರೋಧಿಗಳನ್ನು ಮುಗಿಸಲು ಶತ್ರು ಪೂಜೆ: ಡಿಕೆಶಿಗೆ ಕುಮಾರಸ್ವಾಮಿ ಟಾಂಗ್‌

ಬೆಂಗಳೂರು: ಶತ್ರುಗಳನ್ನು ಮುಗಿಸಿ ಅಧಿಕಾರ ಪಡೆಯಲು ಡಿಕೆ ಶಿವಕುಮಾರ್‌ ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಕುಮಾರಸ್ವಾಮಿ  ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು  ಶತ್ರು ಸಂಹಾರ ಪೂಜೆ ಮಾಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಲ್ಲರನ್ನು ದೇವರೇ ಕಾಪಾಡಬೇಕು. ಅಧಿಕಾರ ಬೇಕು ಅಂತ ದೇವರನ್ನು ಪ್ರಾರ್ಥಿಸುವುದು, ವಿರೋಧಿಗಳ ನಾಶಕ್ಕೆ ಪೂಜೆ ಮಾಡಿಸುವುದು. ಶತ್ರು ನಾಶ ಮಾಡಪ್ಪ ಅಂತ ದೇವರನ್ನು ಬೇಡಿ ಕೋಳ್ಳುವುದು ಅವರ ಚಾಳಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೆಸರು ಹೇಳದೆ ಡಿಕೆ ಶಿವಕುಮಾರ್‌ ಅವರ ಶತ್ರು ಸಂಹಾರ ಪೂಜೆಯ ಬಗ್ಗೆ ಮಾತನಾಡಿದ್ದಾರೆ.

ಇನ್ನು ವೈಕೊಂಠ ಏಕಾದಶಿಯ ಶುಭಾಶಯ ತಿಳಿಸಿದ ಕುಮಾರಸ್ವಾಮಿ ಅವರು, ವೈಕುಂಠ ಏಕಾದಶಿಯ ದಿನ ವೈಕುಂಠದ ಬಾಗಿಲು ತೆರೆದಿರುತ್ತೆ ಎಂಬ ನಂಬಿಕೆ ಇದೆ. ಈ ವಿಶೇಷ ದಿನದಂದು ವಿಷ್ಣು ದೇಶ ಆಳುವವರಿಗೆ, ರಾಜ್ಯ ಆಳುವವರಿಗೆ ಎಲ್ಲರಗೂ ಒಳ್ಳೆಯ ಬುದ್ದಿ ಕೊಟ್ಟು ಜನತೆಯ ಸಮಸ್ಯೆ ನಿವಾರಿಸುವ ವಾತಾವರಣನಿರ್ಮಾಣ ಮಾಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.

Tags:
error: Content is protected !!