ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಇ.ಡಿ.ತನಿಖಾಧಿಕಾರಿ ವಿ.ಮುರುಳಿಕಣ್ಣನ್ ಎಂಬ ಹೆಸರಿನಲ್ಲಿ ನಾಳೆ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಮುಡಾ ಹಗರಣದ ಬಗ್ಗೆಯ ತನಿಖೆಗಾಗಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಜನವರಿ.3 ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ.ತನಿಖಾ ಅಧಿಕಾರಿಗಳು ನೋಟಿಸ್ ನೀಡಿ, ಜನವರಿ.9ಕ್ಕೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು. ಆ ವೇಳೆ ಸಿಎಂ ಪತ್ನಿ ಪಾರ್ವತಿಯವರು ದಾಖಲೆಗಳ ಸಂಗ್ರಹಕ್ಕಾಗಿ ಕಾಲಾವಕಾಶ ಕೋರಿ ಮನವಿ ಮಾಡಿದ್ದರು. ಆದರೆ ಇದೀಗ ಮೊದಲ ನೋಟಿಸ್‌ಗೆ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ಜನವರಿ.24 ರಂದು ನೋಟಿಸ್ ಜಾರಿ ಮಾಡಿದೆ.
ಈ ನೋಟಿಸ್‌ನ ಅನ್ವಯ ಜನವರಿ.28(ನಾಳೆ) ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಶಾಂತಿನಗರದ ಇ.ಡಿ.ಕಚೇರಿಗೆ ದಾಖಲೆ ಸಹಿತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದೆ.
ನೋಟಿಸ್‌ನಲ್ಲಿ ಏನಿದೆ?
ಮುಡಾ ಹಗರಣದ ವಿಚಾರವಾಗಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಪಿಎಂಎಲ್‌ಎ ಸೆಕ್ಷನ್‌ಗಳನ್ನು ಉಲ್ಲೇಖಿಸಿ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ತನಿಖಾಧಿಕಾರಿ ವಿ.ಮುರುಳಿಕಣ್ಣನ್ ಅವರ ಹೆಸರಿನಲ್ಲಿ ಇ.ಡಿ.ಸಂಸ್ಥೆಯೂ ನೋಟಿಸ್ ನೀಡಿದೆ.
ನನ್ನ ಪತ್ನಿಗೆ ನೋಟಿಸ್ ಬಂದಿರುವುದು ನಿಜ
ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ನನ್ನ ಪತ್ನಿಗೆ ಇ.ಡಿ.ಅಧಿಕಾರಿಗಳು ನೋಡಿರುವುದು ನಿಜ. ನನ್ನ ಪತ್ನಿಗೆ ಇ.ಡಿ.ಸಂಸ್ಥೆಯಿಂದ ನೋಟಿಸ್ ಬಂದಿರುವುದು ನಿಜ ಎಂದು ಹೇಳಿದ್ದಾರೆ.