Mysore
19
few clouds

Social Media

ಬುಧವಾರ, 21 ಜನವರಿ 2026
Light
Dark

ವಿಜಯಪುರದ ಹಲವೆಡೆ ಭೂಕಂಪನ: ಭಾರೀ ಸದ್ದಿಗೆ ಬೆಚ್ಚಿಬಿದ್ದ ಜನತೆ

ವಿಜಯಪುರ: ತಿಕೋಟ ಹಾಗೂ ವಿಜಯಪುರ ತಾಲ್ಲೂಕಿನ ಹಲವೆಡೆ ಭೂಕಂಪನದ ಅನುಭವಾಗಿದೆ. ರಿಕ್ಟರ್‌ ಮಾಪಕದಲ್ಲಿ 2.8 ರಷ್ಟು ತೀವ್ರತೆ ದಾಖಲಾಗಿದೆ.

ಹೊನ್ನೂಟಗಿ, ಕವಲಗಿ, ಕಗ್ಗೋಡ, ಮಧಬಾವಿ, ದ್ಯಾಬೇರಿ ಭಾಗಗಳು ಸೇರಿದಂತೆ, ತ್ರಿಕೋಟ ತಾಲ್ಲೂಕಿನ ಹಲವೆಡೆ ಭೂಮಿ ಕಂಪಿಸಿದೆ. ಶುಕ್ರವಾರ ರಾತ್ರಿ 10.01ಕ್ಕೆ ಭೂಕಂಪನದ ಅನುಭವ ಆಗಿದೆ. ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ವಿಜಯಪುರ ಗ್ರಾಮೀಣ ಭಾಗದ 12 ಕಿ.ಮೀ ಸುತ್ತ ಮುತ್ತ ಭೂಕಂಪನದ ಅನುಭವ ಆಗಿದೆ.

ಇದನ್ನು ಓದಿ: ಕಲಬುರ್ಗಿಯ ಚಿಂಚನಸೂರಿನಲ್ಲಿ ಭೂಕಂಪನ: 2.3 ತೀವ್ರತೆ ದಾಖಲು

ಭೂಕಂಪನ ಆಪ್‌ಗಳಲ್ಲೂ ಭೂಕಂಪನ ತೀವ್ರತೆ ದಾಖಲಾಗಿದೆ. 2.8 ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದ್ದು, ಮೇಲಿಂದ ಮೇಲೆ ಇಂತಹ ಅನುಭವ ಆಗುತ್ತಿರುವುದರಿಂದ ಜನ ಆತಂಕಕ್ಕೀಡಾಗಿದ್ದಾರೆ. ಭೂಮಿ ಕಂಪಿಸಿದ ಅನುಭವ ಆದ ತಕ್ಷಣವೇ ಹಲವು ಜನರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.

ಕಳೆದ ತಿಂಗಳು ಸಿಂದಗಿ ಪಟ್ಟಣದಲ್ಲಿ ಕೂಡ ಸರಣಿ ಭೂಕಂಪನದ ಅನುಭವವಾಗಿತ್ತು. ಈಗ ನಗರ ಭಾಗದಲ್ಲಿ ಕಂಪನದ ಅನುಭವ ಆಗಿ ಜನತೆಯಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ.

ಇನ್ನು ಈ ಕುರಿತು ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದು, ಭೂಮಿ ಆಗಾಗ್ಗೆ ಕಂಪಿಸಲು ಏನೆಲ್ಲಾ ಕಾರಣವಿರಬಹುದು ಎಂದು ಕೂಲಂಕುಷವಾಗಿ ಅಧ್ಯಯನ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!