ಬೆಂಗಳೂರು : ರಾಜಕಾರಣಿ ಹಾಗೂ ಹಿರಿಯ ನಟಿ ಉಮಾಶ್ರೀ ಅವರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಪ್ರತಿಷ್ಠಿತ ಡಾ. ರಾಜ್ ಕುಮಾರ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.
2019ನೇ ಸಾಲಿಗೆ ಅನ್ವಯವಾಗುವಂತೆ ಡಾ. ರಾಜ್ ಕುಮಾರ್ ಪ್ರಶಸ್ತಿ, ಡಾ. ವಿಷ್ಣುವರ್ದನ್ ಪ್ರಶಸ್ತಿ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಳನ್ನು ನೀಡುವ ಸಲುವಾಗಿ ಸರ್ಕಾರ ನೇಮಿಸಿದ್ದ ವಿವಿಧ ಸಮಿತಿಗಳು ನೀಡಿದ ಶಿಫಾರಸ್ಸಿನ ಅನ್ವಯ ಈ ಪ್ರಶಸ್ತಿಗಳಿಗೆ ಭಾಜನರಾದವರ ಪಟ್ಟಿಯನ್ನು ಅ. 30ರಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
2019ನೇ ಸಾಲಿಗೆ ಅನ್ವಯವಾಗುವಂತೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಡಾ. ವಿಷ್ಣುವರ್ದನ್ ಪ್ರಶಸ್ತಿಗೆ ಆಯ್ಕೆಯಾದವರನ್ನು ಆಯ್ಕೆ ಮಾಡಲಾಗಿದ್ದು ಆ ಪಟ್ಟಿಯನ್ನೂ ಅ. 30ರಂದು ಬಿಡುಗಡೆ ಇದೇ ವೇಳೆ ಮಾಡಲಾಗಿದೆ.
ಇದನ್ನೂ ಓದಿ:-ಹುಣಸೂರು | ನಾಪತ್ತೆಯಾಗಿದ್ದ ವಕೀಲ ಶವವಾಗಿ ಪತ್ತೆ
2019ರ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಹಿರಿಯ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಆಯ್ಕೆಯಾಗಿದ್ದಾರೆ. ಇನ್ನು, 2019ರ ಡಾ. ವಿಷ್ಣುವರ್ದನ್ ಪ್ರಶಸ್ತಿಗೆ ಹಿರಿಯ ನಿರ್ಮಾಪಕ ಹಾಗೂ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ ಅವರು ಆಯ್ಕೆಯಾಗಿದ್ದಾರೆ. ಡಾ. ರಾಜ್ ಕುಮಾರ್ ಪ್ರಶಸ್ತಿ, ಡಾ. ವಿಷ್ಣುವರ್ದನ್ ಪ್ರಶಸ್ತಿ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಜೇತರಿಗೆ ತಲಾ 5 ಲಕ್ಷ ರೂ. ನಗದು ಹಾಗೂ 50 ಗ್ರಾಂ. ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





