ಬೆಂಗಳೂರು: ಹುಲಿ ವಲಸೆ ಹೆಚ್ಚುತ್ತಿರುವ ವರದಿಗಳನ್ನು ತಜ್ಞರು ಮತ್ತು ಅರಣ್ಯ ಸಿಬ್ಬಂದಿಗಳು ಗಮನಿಸುತ್ತಿದ್ದು, ಕ್ಯಾಮರಾ ಟ್ರ್ಯಾಪ್‌ಗಳಿಂದ ಸೆರೆ ಹಿಡಿಯುತ್ತಿದ್ದಾರೆ.
ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಈಗ ಸ್ಥಳೀಯರೊಂದಿಗೆ ಕೆಲಸ ಮಾಡುತ್ತಿದ್ದು, ಸುತ್ತುತ್ತಿರುವ ಹುಲಿಗಳಿಂದ ದೂರ ಇರುವಂತೆ ಸಲಹೆ ನೀಡಿದ್ದಾರೆ.
ಸುತ್ತಾಡುವ ಹುಲಿಗಳ ಅಧ್ಯಯನವನ್ನು ಸಹ ಇಲಾಖೆ ಕೈಗೊಂಡಿದೆ. ಮಾನವ ಮತ್ತು ವನ್ಯಜೀವಿಗಳ ಸಂಘರ್ಷದಲ್ಲಿ ಕಾಡು ಪ್ರಾಣಿಗಳ ಸಾವನ್ನು ಕಡಿಮೆ ಮಾಡಲು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಪ್ರಾಜೆಕ್ಟ್ ಟೈಗರ್ ಪ್ರಕಾರ, ರಾಜ್ಯದಲ್ಲಿ ಬಂಡೀಪುರ-ನಾಗರಹೊಳೆ, ಬಿಆರ್‌ಟಿ -ಕಾವೇರಿ-ಎಂಎಂ ಹಿಲ್ಸ್, ಭದ್ರಾ-ಕುದುರೆಮುಖ-ಶಿವಮೊಗ್ಗ-ಚಿಕ್ಕಮಗಳೂರು ಮತ್ತು ಕಾಳಿ, ಬೆಳಗಾವಿ, ಶರಾವತಿ ಹುಲಿ ಸಂರಕ್ಷಿತ ಅರಣ್ಯಗಳಿವೆ. ಇವುಗಳಲ್ಲಿ 75% ಹುಲಿಗಳು ಬಂಡೀಪುರ-ನಾಗರಹೊಳೆ ಹುಲಿ ಮೀಸಲು ಅರಣ್ಯದಲ್ಲಿ ನೆಲೆಸಿವೆ.
ಜಾನುವಾರುಗಳ ಮೇಲೆ ಹುಲಿಗಳು ದಾಳಿ ನಡೆಸುವಾಗ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಾರೆ. ಈ ಹಿನ್ನೆಲೆಯಲ್ಲಿ ಹುಲಿಗಳು ಪ್ರಾದೇಶಿಕವಾಗಿದ್ದು, ವಿವಿಧ ಸ್ಥಳಗಳಿಗೆ ತೆರಳಲು ಪ್ರಾರಂಭಿಸಿವೆ. ಹೀಗಾಗಿ ಅದನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.