Mysore
20
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ದರ್ಶನ್‌ಗೆ ಫಿಸಿಯೊಥೆರಪಿ ಸ್ಟಾಪ್‌ ಮಾಡಿದ ವೈದ್ಯರು

darshan

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್‌ಗೆ ಬೆನ್ನುನೋವು ಮಾಯವಾಯ್ತಾ ಎಂಬ ಕುತೂಹಲ ಮನೆ ಮಾಡಿದೆ.

ದರ್ಶನ್‌ ಬೆನ್ನುನೋವಿಗೆ ಫಿಸಿಯೊಥೆರಪಿ ಬೇಕಿಲ್ಲ ಎಂದು ಸಿ.ವಿ.ರಾಮನ್‌ ಆಸ್ಪತ್ರೆ ವೈದ್ಯರ ತಂಡದಿಂದ ಜೈಲಾಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಬಾರಿಗೆ ಜೈಲು ಸೇರಿದ್ದಾಗ ದರ್ಶನ್‌ ಇದೇ ವಿಷಯದಲ್ಲಿ ಜಾಮೀನು ಪಡೆದಿದ್ದರು. 2ನೇ ಬಾರಿ ದರ್ಶನ್‌ ಪರಪ್ಪನ ಅಗ್ರಹಾರ ಸೇರಿದಾಗಲೂ ದರ್ಶನ್‌ ಅದೇ ಸಮಸ್ತೆ ಹೇಳಿದ್ದರು. ಆದರೆ ಜಾಮೀನಿಗೆ ಒಪ್ಪದ ಕೋರ್ಟ್‌ ಜೈಲಿನಲ್ಲೇ ಚಿಕಿತ್ಸೆ ಪಡೆಯಲು ಸೂಚನೆ ನೀಡಿತ್ತು.

ಅದರಂತೆ ಆಸ್ಪತ್ರೆಯ ನಾಲ್ವರು ವೈದ್ಯರ ತಂಡ ಪಿಸಿಯೋಥೆರಪಿ ಮಾಡುತ್ತಿದ್ದರು. ಈಗ ತಪಾಸಣೆ ಬಳಿಕ ವರದಿ ಸಲ್ಲಿಸಿರುವ ವೈದ್ಯರ ತಂಡ ದರ್ಶನ್‌ಗೆ ಫಿಸಿಯೋಥೆರಪಿ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಎರಡನೇ ಬಾರಿ ಜೈಲು ಸೇರಿದ ಬಳಿಕ ದರ್ಶನ್‌ 10ರಿಂದ 12 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!