Mysore
30
scattered clouds

Social Media

ಶನಿವಾರ, 07 ಡಿಸೆಂಬರ್ 2024
Light
Dark

ಸೋತು ಒಂದು ತಿಂಗಳಾಗಿಲ್ಲ, ಆಗಲೇ ಇನ್ನೊಂದು ಚುನಾವಣೆ ಎಂದರೆ ಜನ ನಗುತ್ತಾರೆ ; ಡಿ.ಕೆ ಸುರೇಶ್‌

ಬೆಂಗಳೂರು : ಜನರು ಬಯಸಿದ್ದೇ ಆದಲ್ಲಿ ನಾನೇ ಸ್ಪರ್ಧೆ ಮಾಡುತ್ತೇನೆ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿಕೆಗೆ ಮಾಜಿ ಸಂಸದ ಡಿಕೆ ಸುರೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ʼಜನ ಏನು ತೀರ್ಮಾನ ಮಾಡ್ತಾರೆ ಅದಕ್ಕೆ ತಲೆ ಬಾಗುತ್ತೇವೆ. ಅವರು ಸೂಚನೆ ಕೊಟ್ರೆ ಅದರಂತೆ ಪಕ್ಷ ನಡೆಯಲಿದೆ. ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡ್ತೇನೆ. ನನ್ನನ್ನು ಜನ ತಿರಸ್ಕರಿಸಿದ್ದಾರೆ, ಸೋತು ಒಂದು ತಿಂಗಳು ಆಗಿಲ್ಲ. ಆಗಲೇ ಇನ್ನೊಂದು ಚುನಾವಣೆ ಎಂದರೆ ಜನ ನಗುತ್ತಾರೆ ಎಂದರು.

ಬೇರೆಯವರು ಕೆಲಸ ಮಾಡಲಿ ನಾವು ಸಹಕಾರ ಕೋಡೋಣ. ಮೊದಲಿಂದಲೂ ಚನ್ನಪಟ್ಟಣದಲ್ಲಿ ಒಡನಾಟವಿದೆ. ಲೋಕಸಭೆಯಲ್ಲಿ ಒಳ್ಳೆಯ ಮತ ನೀಡಿದ್ದಾರೆ. ಶಾಸಕರು ಇಲ್ಲದ ಸಂದರ್ಭದಲ್ಲಿ ಸರ್ಕಾರ ಅಭ್ಯರ್ಥಿ ಮಾಡಬೇಕು. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಲವಾಗಿದೆ‌‌‌ ಎಂದರು

ಇದೇ ಸಂದರ್ಭದಲ್ಲಿ ಚನ್ನಪಟ್ಟಣ ಉಪ ಚುನಾವಣೆಯ ಬಗ್ಗೆ ಮಾತನಾಡಿದ ಅವರು, ಚನ್ನಪಟ್ಟಣದ ಜನ ಯಾರನ್ನು ಬಯಸುತ್ತಾರೋ ಅವರು ಅಭ್ಯರ್ಥಿಯಾಗುತ್ತಾರೆ. ರಾಮನಗರ ನಮ್ಮ ಸ್ವಂತ ಜಿಲ್ಲೆ, ಡಿಕೆಶಿಗೆ ಪಕ್ಷದ ಅಧ್ಯಕ್ಷರಾಗಿ ಡಿಸಿಎಂ ಆಗಿ ಅವರ ಮೇಲೆ ಜವಾಬ್ದಾರಿ ಇದೆ. ಉಪಚುನಾವಣೆ ಬರುವುದರಿಂದ ಆ ಕ್ಷೇತ್ರದಲ್ಲಿ ಶಾಸಕರಿಲ್ಲ. ಹಾಗಾಗಿ ಅಲ್ಲಿಯ ಕಾರ್ಯಕರ್ತರು ಸಾಕಷ್ಟು ಅಹವಾಲು ಕೊಡ್ತಾ ಇದ್ದಾರೆ. ಹಾಗಾಗಿ ಡಿಸಿಎಂ ಭೇಟಿ ಕೊಡ್ತಾ ಇದ್ದಾರೆ ಎಂದರು.

Tags: