Mysore
27
scattered clouds
Light
Dark

ರಾಹುಲ್‌ ಗಾಂಧಿಯ ಭಾರಿ ಮೊತ್ತದ ಶ್ಯೂರಿಟಿಗೆ ಸಹಿ ಹಾಕಿದ ಡಿ.ಕೆ ಸುರೇಶ್

ಬೆಂಗಳೂರು: ಬಿಜೆಪಿ ವಿರುದ್ಧದ ಜಾಹೀರಾತು ಪ್ರಕರಣದ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ದೊರಕಿದ್ದು, ಭಾರಿ ಮೊತ್ತದ ಶ್ಯೂರಿಟಿಗೆ ಡಿ.ಕೆ ಸುರೇಶ್‌ ಸಹಿ ಹಾಕಿದ್ದಾರೆ.

2023 ರ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಮಾಡಿದ್ದ ಪರ್ಸೆಂಟೇಜ್‌ ಆರೋಪದ ಬಗ್ಗೆ ವಿಚಾರಣೆಗೆ ಖುದ್ದಾಗಿ ಹಾಜರಾಗಲೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬೆಂಗಳೂರಿಗೆ ಬಂದಿದ್ದರು. ಈ ಬಗ್ಗೆ ಬೆಂಗಳೂರಿನ ೪೨ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದ ರಾಹುಲ್‌ ಅವರಿಗೆ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯದ ಕಲಾಪ ಆರಂಭವಾದಾಗ ವಾದ ವಿವಾದ ಆಲಿಸಿದ ನ್ಯಾಯಾಧೀಶರು ರಾಹುಲ್‌ ಗಾಂಧಿ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಇನ್ನೂ ಈ ಪ್ರಕರಣವನ್ನು ಜೂನ್‌ 30 ಕ್ಕೆ ಮುಂದೂಡಲಾಗಿದೆ.

ರಾಹುಲ್‌ ಗಾಂಧಿಗೆ ನೀಡುರುವ ಷರತ್ತು ಬದ್ಧ ಜಾಮೀನಿನ 75 ಲಕ್ಷ ಶ್ಯೂರಿಟಿಗೆ ಡಿ.ಕೆ ಸುರೇಶ್‌ ಅವರು ಸಹಿ ಹಾಕಿದ್ದಾರೆ.