Mysore
20
overcast clouds
Light
Dark

ಅಶ್ಲೀಲ ಚಿತ್ರವೊಂದಕ್ಕೆ ಡಿಕೆಶಿ ಫೋಟೋ ಜೋಡಣೆ; ಮೂವರ ವಿರುದ್ಧ ದೂರು ದಾಖಲು

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್‌ ಆದ ಬೆನ್ನಲೇ ಇದೀಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಫೋಟೋಗೆ ಬೇರೊಂದು ಅಶ್ಲೀಲ ಚಿತ್ರ ಜೋಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಬಗ್ಗೆ ಕೆಪಿಸಿಸಿ ಕಾನೂನು ಘಟಕ ಪೊಲೀಸರಿಗೆ ದೂರು ನೀಡಿದೆ.

ಅಶ್ಲೀಲ ಚಿತ್ರವೊಂದಕ್ಕೆ ಡಿ.ಕೆ ಶಿವಕುಮಾರ್‌ ಫೋಟೋ ಮಾರ್ಫಿಂಗ್‌ ಮಾಡಲಾಗಿದೆ ಎಂದು ಆರೋಪಿಸಿ ಸಂತೋಷ್‌, ರಾಜೇಶ್‌, ಕೇಸರಿ ಸಾಮ್ರಾಟ್‌ ಅವರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಗೆ ದೂರು ದಾಖಲಿಸಿದೆ.

ಡಿಕೆ ಶಿವಕುಮಾರ್‌ ಮುಖ ಜೋಡಣೆ ಮಾಡಿರುವ ಅಸಲಿ ಚಿತ್ರ ಬಿಜೆಪಿ ಮುಖಂಡನದ್ದಾಗಿದ್ದು, ಇದೀಗ ಆ ಎಡಿಟ್‌ ಚಿತ್ರವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಯುಟ್ಯೂಬ್‌, ಎಕ್ಸ್‌ ಖಾತೆಯಲ್ಲಿ ಹರಿಬಿಡಲಾಗಿದೆ. ಈ ಹಿನ್ನೆಲೆ ಆರೋಪಿಗಳ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾನೂನು ಘಟಕ ದೂರು ಸಲ್ಲಿಸಿತ್ತು. ಈ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಸಂತೋಷ್, ರಾಜೇಶ್, ಕೇಸರಿ ಸಾಮ್ರಾಟ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.