Mysore
14
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಡಿನ್ನರ್‌ ಮೀಟಿಂಗ್‌ ಶಕ್ತಿ ಪ್ರದರ್ಶನವಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಳಗಾವಿ : ಡಿನ್ನರ್ ಮೀಟಿಂಗ್ ಗಳ ಮೂಲಕ ತಾವು ಶಕ್ತಿ ಪ್ರದರ್ಶನ ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇಲ್ಲಿನ ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರ ಮೇಲಿನ ಗೌರವದಿಂದಾಗಿ ನಾವು ನಿನ್ನೆ ಆಹ್ವಾನದ ಮೇರೆಗೆ ಊಟಕ್ಕೆ ಹೋಗಿದ್ದೆವು. ಇದು ಯಾವುದೇ ಔತಣಕೂಟದ ಸಭೆ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನು ಓದಿ: ಎಸ್‌ಸಿ,ಎಸ್‌ಟಿಗೆ ಮೀಸಲಿಟ್ಟ 50ಸಾವಿರ ಕೋಟಿ ದುರಪಯೋಗ : ತಮ್ಮದೇ ಸರ್ಕಾರದ ವಿರುದ್ಧ ಆರೋಪ

ಈ ಸಭೆಯನ್ನು ಶಕ್ತಿ ಪ್ರದರ್ಶನ ಎಂದು ಭಾವಿಸಬೇಕಿಲ್ಲ. ನನ್ನ ಪರವಾಗಿ ಯಾರು ಮಾತನಾಡುವ ಅವಶ್ಯಕತೆ ಇಲ್ಲ. 140 ಮಂದಿ ಶಾಸಕರು ಒಂದೇ, ಮುಖ್ಯಮಂತ್ರಿ ಹಾಗೂ ನಾನು ಎಲ್ಲರೂ ಒಂದೇ ಗುಂಪು ಎಂದರು.
ಡಾ.ಯತೀಂದ್ರ ಸಿದ್ರಾಮಯ್ಯ ಅವರ ಹೇಳಿಕೆಯ ಬಗ್ಗೆ ಮುಖ್ಯಮಂತ್ರಿಯವರೇ ಪ್ರತಿಕ್ರಿಯೆ ನೀಡುತ್ತಾರೆ ಎಂದು ಜಾರಿಕೊಂಡರು.

ಇದೇ ಸಂದರ್ಭದಲ್ಲಿ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹಿಂಡಲಗದಲ್ಲಿ ಕಾಂಗ್ರೆಸ್? ಕಚೇರಿ ಹಾಗೂ ತರಬೇತಿ ಕೇಂದ್ರ ಸ್ಥಾಪನೆ ಮಾಡಲು ಉದ್ದೇಶಿಸಿರುವ ಸ್ಥಳಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Tags:
error: Content is protected !!