ರಾಮನಗರ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಡಿ.ಕೆ ಸಹೋದರರು ಹೇಳಿದ್ದರು. ಆದರೆ ಆ ಅಚ್ಚರಿ ಅಭ್ಯರ್ಥಿ ಈಗ ಜೈಲುಪಾಲಾಗಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಿ.ಪಿ ಯೋಗೇಶ್ವರ್ ಅವರ ಈ ಹೇಳಿಕೆಯಿಂದ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಕಾಂಗ್ರೆಸ್‌ನಿಂದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧತೆ ನಡೆಸಿದ್ರಾ? ಈ ಬಗ್ಗೆ ಡಿಕೆ ಸಹೋದರರು ಪ್ಲಾನ್ ಮಾಡಿದ್ರಾ? ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ಉಪ ಚುನಾವಣೆ ಕುರಿತು ಶುಕ್ರವಾರ(ಜೂ.14) ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಟ ದರ್ಶನ್ ಹೆಸರನ್ನು ಪ್ರಸ್ತಾಪಿಸದೆ ಸಿ.ಪಿ ಯೋಗೇಶ್ವರ್ ಪ್ರತಿಕ್ರಿಯಿಸಿದರು. ಚನ್ನಪಟ್ಟಣಕ್ಕೆ ಅಚ್ಚರಿಯ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದು ಡಿ.ಕೆ ಸುರೇಶ್ ಅವರೇ ಹೆಳಿದ್ರು. ಕಾಂಗ್ರೆಸ್ ಪರವಾಗಿ ಚಿತ್ರನಟರೊಬ್ಬರು ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ನನಗೆ ಬಂದ ಮಾಹಿತಿ ಪ್ರಕಾರ, ಅವರನ್ನೇ ಕರೆದುಕೊಂಡು ಬಂದು ನಿಲ್ಲಿಸರು ಸಹೋದರರು ಸಿದ್ಧತೆ ನಡೆಸಿದ್ದರು. ಈಗ ಬೇರೆಯವರನ್ನು ಕರೆ ತರುತ್ತಾರಾ ನೋಡಬೇಕು ಎಂದು ಹೇಳಿದ್ದಾರೆ.
ದರ್ಶನ್ ಮೇಲಿನ ಕೊಲೆ ಆರೋಪದ ಬಗ್ಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನೋಡಿ ಈ ಬಗ್ಗೆ ತಿಳಿದುಕೊಂಡೆ, ಇದೊಂದು ವಿಚಿತ್ರ ಕೇಸ್ ಅನ್ನಿಸುತ್ತೆ. ರಾಜಕೀಯಕ್ಕೆ ಬರಬೇಕು ಅಂತ ಆಸೆ ಇತ್ತೇನೋ ಆದರೆ ಈ ರೀತಿ ಅನಾಹುತ ಮಾಡಿಕೊಂಡು ಜೈಲಿ ಸೇರಿದ್ದಾರೆ. ನೋಡೊಣ ಬೇರೆಯವರನ್ನ ಕರೆ ತರುತ್ತಾರಾ ಎಂದರು.