Mysore
27
clear sky

Social Media

ಮಂಗಳವಾರ, 20 ಜನವರಿ 2026
Light
Dark

ಧರ್ಮಸ್ಥಳ | ಸಿಎಂ ಭೇಟಿಯಾಗಿ ಚರ್ಚೆ ನಡೆಸಿದ ಎಸ್‌ಐಟಿ ಮುಖ್ಯಸ್ಥ

Dharmasthala case PAN card torn blouse found excavation continues

ಬೆಂಗಳೂರು : ಧರ್ಮಸ್ಥಳದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಎಸ್‍ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತನಿಖೆ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವರೆಗೂ ಗೃಹ ಸಚಿವ ಡಾ.ಜಿ. ಪರಮೇಶ್ವರನ್ನು ಭೇಟಿಯಾಗುತ್ತಿದ್ದ ಪ್ರಣಬ್ ಮೊಹಾಂತಿ ಇಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ರಾಶಿ-ರಾಶಿ ಅಸ್ಥಿಪಂಜರಗಳಿವೆ ಎಂದು ಸೌಜನ್ಯ ಅವರ ಮಾವ ವಿಠಲ್‍ಗೌಡ ಹೇಳಿಕೆ ನೀಡಿದ್ದರು. ಈ ಸಂಬಂಧಪಟ್ಟಂತೆ ಮತ್ತೇ ಉತ್ಖನನವನ್ನು ಮುಂದುವರೆಸಬೇಕೆ? ಬೇಡವೇ? ಎಂಬ ನಿಟ್ಟಿನಲ್ಲಿ ಎಸ್‍ಐಟಿ ಅಧಿಕಾರಿಗಳು ಭಾನುವಾರ ಸಭೆ ನಡೆಸಿ ಚರ್ಚೆ ನಡೆಸಿದ್ದರು.

ಉತ್ಖನನಕ್ಕೆ ಸಂಬಂಧಪಟ್ಟಂತೆ ಒಮ್ಮತದ ಅಭಿಪ್ರಾಯ ಕಂಡು ಬಂದಿಲ್ಲ. ಜೊತೆಗೆ ಬಂಗ್ಲೆಗುಡ್ಡ ಅರಣ್ಯ ಪ್ರದೇಶವಾಗಿರುವುದರಿಂದ ಅಲ್ಲಿ ಉತ್ಖನನ ನಡೆಸಿದರೆ ಎದುರಾಗಬಹುದಾದ ಸಾಧಕ-ಬಾಧಕಗಳು, ಕಾನೂನಿನ ತೊಡಕುಗಳು ತೀವ್ರ ಸ್ವರೂಪದಲ್ಲಿವೆ. ಅರಣ್ಯ ಇಲಾಖೆ ಪೂರ್ವಾನುಮತಿಯಿಲ್ಲದೆ ಉತ್ಖನನ ನಡೆಸುವುದು ಕಷ್ಟಸಾಧ್ಯ. ಅರಣ್ಯ ಇಲಾಖೆ ಅನುಮತಿ ಪಡೆಯುವುದು ಕೂಡ ಅಷ್ಟೆ ಕ್ಲಿಷ್ಟ ಸಮಸ್ಯೆಯಾಗಿದೆ. ಈಗಾಗಲೇ ಸಾಕಷ್ಟು ಪ್ರದೇಶಗಳಲ್ಲಿ ಉತ್ಖನನ ನಡೆಸಲಾಗಿದೆ. ಅದರೆ ಮಹತ್ವ ಸುಳಿವುಗಳು ಅಥವಾ ಪುರಾವೆಗಳು ದೊರೆತ್ತಿಲ್ಲ.

ಚಿನ್ನಯ್ಯ ಮಾಹಿತಿ ನೀಡಿದ ಆಧಾರದ ಮೇಲೆ ಎಸ್‍ಐಟಿ ಅಧಿಕಾರಿಗಳು ನಡೆಸಿದ ಉತ್ಖನನ ವ್ಯಾಪಕ ಟೀಕೆಗೂ ಗುರಿಯಾಗಿತ್ತು. ಚಿನ್ನಯ್ಯನನ್ನು ಬಂಧಿಸಿ ಎಸ್‍ಐಟಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳುವ ಪ್ರಯತ್ನ ನಡೆಸಿದೆ. ಈಗ ಸೌಜನ್ಯ ಅವರ ಮಾವ ಅದೇ ರೀತಿಯ ಹೇಳಿಕೆಗಳನ್ನು ನೀಡಿ ಹೊಸ ವಿವಾದಗಳನ್ನು ಹುಟ್ಟುಹಾಕಿದ್ದಾರೆ. ವಿಠಲ್‍ಗೌಡ ಅವರ ಹೇಳಿಕೆಯನ್ನು ಕಡೆಗಣಿಸುವಂತೆಯೂ ಇಲ್ಲ ಅಥವಾ ಅವರು ಹೇಳಿದಾಕ್ಷಣ ಉತ್ಖನನ ನಡಸುವುದು ಕೂಡ ಕಷ್ಟಸಾಧ್ಯ ಎಂಬ ಧರ್ಮ ಸಂಕಟದಲ್ಲಿರುವ ಎಸ್‍ಐಟಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಲಹೆ ಕೇಳಿದ್ದಾರೆ ಎನ್ನಲಾಗಿದೆ.

ಜೊತೆಗೆ ಈವರೆಗೂ ನಡೆದಿರುವ ತನಿಖೆಯ ಪ್ರಗತಿಯನ್ನು ಮುಖ್ಯಮಂತ್ರಿ ಅವರಿಗೆ ಪ್ರಣಬ್ ಮೊಹಾಂತಿ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags:
error: Content is protected !!