Mysore
16
scattered clouds

Social Media

ಬುಧವಾರ, 21 ಜನವರಿ 2026
Light
Dark

ಕರ್ನೂಲ್‌ ಪ್ರಕರಣ ಬಳಿಕ ಎಚ್ಚೆತ್ತಾ ಸಾರಿಗೆ ಇಲಾಖೆ : ನಿಯಮ ಬಾಹಿರವಾಗಿ ಜನರನ್ನು ಸಾಗಿಸುತ್ತಿದ್ದ 6 ಬಸ್‌ ಜಪ್ತಿ

ಬೆಂಗಳೂರು : ಆಂಧ್ರಪ್ರದೇಶದ ಕರ್ನೂಲ್‍ನಲ್ಲಿ ಖಾಸಗಿ ಬಸ್ ಬೆಂಕಿಗಾಹುತಿಯಾಗಿ 20 ಜನ ಮೃತಪಟ್ಟ ಬೆನ್ನಲ್ಲೇ ರಾಜ್ಯದ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ತ್ವರಿತ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭದಲ್ಲಿ ನೇಪಾಳ ಗಡಿಯಿಂದ ನಿಯಮ ಬಾಹಿರವಾಗಿ ಜನರನ್ನು ಸಾಗಿಸುತ್ತಿದ್ದ 6 ಬಸ್‍ಗಳನ್ನು ಜಪ್ತಿ ಮಾಡಲಾಗಿದೆ.

ಗುರುವಾರ ಮುಂಜಾನೆ 4 ಗಂಟೆಯಿಂದಲೇ ಸಾರಿಗೆ ಇಲಾಖೆಯ 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದೇವನಹಳ್ಳಿ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಟೋಲ್ ಬಳಿ ತಪಾಸಣೆ ನಡೆಸಿದರು.ಈ ಸಂದರ್ಭದಲ್ಲಿ ನೇಪಾಳ-ಭಾರತ ಗಡಿಯಿಂದ ಆಗಮಿಸಿದ್ದ ಸ್ಲೀಪರ್‍ಕೋಚ್ ಬಸ್‍ಗಳಲ್ಲಿ ಸಾಮಥ್ರ್ಯ ಮೀರಿ ಜನರನ್ನು ತುಂಬಿಕೊಂಡು ಕರೆ ತರುತ್ತಿರುವುದು ಪತ್ತೆಯಾಗಿದೆ.ಸ್ಲೀಪರ್‍ಕೋಚ್ ಬಸ್‍ನಲ್ಲಿ ಇಬ್ಬರು ಮಲಗಲು ಅವಕಾಶವಿರುವ ಸೀಟುಗಳಲ್ಲಿ, ನಾಲ್ಕೈದು ಮಂದಿಯನ್ನು ಕೂರಿಸಿರುವುದು ಪತ್ತೆಯಾಗಿದೆ. ಸೀಟಿನ ಸಾಮಥ್ರ್ಯ ಮೀರಿ ಜನರನ್ನು ಸಾಗುಸುತ್ತಿದ್ದ ಕಾರಣಕ್ಕೆ ಬಸ್‍ಗಳನ್ನು ಜಪ್ತಿ ಮಾಡಲಾಗಿದೆ.

ಈ ಬಸ್‍ಗಳಲ್ಲಿ ಸುರಕ್ಷತಾ ನಿಯಮಗಳನ್ನೂ ಪಾಲನೆ ಮಾಡುತ್ತಿಲ್ಲ. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ನೋಂದಣಿಯಾದ ಈ ಬಸ್‍ಗಳು ಉದಾಸೀನವಾಗಿ ಜನರನ್ನು ಸಾಗಿಸುತ್ತಿವೆ. ಎಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ತಿದ್ದಿಕೊಳ್ಳುತ್ತಿಲ್ಲ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ನೇಪಾಳದ ಗಡಿಯಿಂದ ಬಸ್‍ನಲ್ಲಿ ಪ್ರಯಾಣಿಸಿರುವ ಜನರಲ್ಲಿ ಎಷ್ಟು ಮಂದಿಗೆ ಕರಾರುವಾಕ್ಕಾದ ದಾಖಲೆಗಳು ಇವೆ ಎಂಬ ಪ್ರಶ್ನೆ ಉದ್ಭವಿಸಿತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರತಿಯೊಬ್ಬ ಪ್ರಯಾಣಿಕನಿಂದಲೂ ಹೇಳಿಕೆ ದಾಖಲಿಸಿ, ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಇಂದು ಬೆಳಗ್ಗೆ ನೇಪಾಳದ ಗಡಿಯಿಂದ ಒಟ್ಟು 6 ಬಸ್‍ಗಳಲ್ಲಿ ಪ್ರಯಾಣಿಕರು ಆಗಮಿಸಿದ್ದಾರೆ. ಪ್ರತಿಯೊಂದರಲ್ಲೂ 80 ರಿಂದ 100 ಮಂದಿಯನ್ನು ಕುರಿಗಳಂತೆ ತುಂಬಿರುವ ಮಾಹಿತಿ ಇದೆ. ದಾಖಲಾಲೆಗಳು ಸರಿಯಿದ್ದ ಪ್ರಯಾಣಿಕರಿಗೆ ಮುಂದಿನ ಪ್ರಯಾಣಕ್ಕೆ ಸಾರಿಗೆ ಅಧಿಕಾರಿಗಳು ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಿದರು.

ಇದನ್ನೂ ಓದಿ:-ಆ ಹುಡುಗ ಎಳಸು, ಆತ ವೇಸ್ಟ್‌ ಮೆಟೀರಿಯಲ್‌ : ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ವಾಗ್ದಾಳಿ

25 ಬಸ್‍ಗಳ ಜಪ್ತಿ:
ಕರ್ನೂಲ್‍ನಲ್ಲಿನ ಬೆಂಕಿ ದುರಂತದ ಬಳಿಕ ಖಾಸಗಿ ಬಸ್‍ಗಳ ಸುರಕ್ಷತೆ ಬಗ್ಗೆ ನಾನಾ ರೀತಿಯ ಪ್ರಶ್ನೆಗಳು ಉದ್ಭವಿಸಿವೆ. ಈ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ದೇವನಹಳ್ಳಿ ಟೋಲ್ ಬಳಿ ಕಾರ್ಯಾಚರಣೆ ನಡೆಸಲಾಯಿತು.ಸಾರಿಗೆ ಇಲಾಖೆ ಅಧಿಕಾರಿಗಳು ನಿಯಮ ಉಲ್ಲಂಘಿಸಿದ 25ಕ್ಕೂ ಹೆಚ್ಚು ಬಸ್‍ಗಳನ್ನು ಜಪ್ತಿ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ದೇವನಹಳ್ಳಿಯ ಎಆರ್‍ಟಿ ಓ ಅವರು, ನೆರೆ ರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡು ರಾಜ್ಯದಲ್ಲಿ ತೆರಿಗೆ ಪಾವತಿಸದ ಬಸ್‍ಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ ಎಂದಿದ್ದಾರೆ.

ಎಲ್ಲಾ ಬಸ್‍ಗಳಲ್ಲೂ ತುರ್ತು ನಿರ್ಗಮನ ಬಾಗಿಲು ಸುಸ್ಥಿತಿಯಲ್ಲಿರಬೇಕು. ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದರೆ ಅದನ್ನು ಕೂಡ ಪರಿಶೀಲಿಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಬಸ್‍ನ ಕಿಟಕಿ ಗಾಜುಗಳನ್ನು ಒಡೆದು ಹೊರ ಹೋಗಲು ಅವಕಾಶ ಇರಬೇಕು ಮತ್ತು ಅದಕ್ಕಾಗಿ ಸುತ್ತಿಗೆಗಳನ್ನು ಇಟ್ಟಿರಬೇಕು. ಈ ಎಲ್ಲಾ ಅಂಶಗಳನ್ನು ತಪಾಸಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಖಾಸಗಿ ಬಸ್ ಮಾಲೀಕರಿಗೆ ಸುರಕ್ಷತೆಯ ಬಗ್ಗೆ ಹಲವಾರು ಬಾರಿ ಸೂಚನೆಗಳನ್ನು ನೀಡಲಾಗಿದೆ. ಅವರು ಕಡೆಗಣಿಸುತ್ತಿದ್ದಾರೆ. ಪ್ರಯಾಣಿಕರನ್ನು ಹೊರತು ಪಡಿಸಿ ಬೇರೆ ಯಾವುದೇ ರೀತಿಯ ವಸ್ತುಗಳನ್ನು ಬಸ್‍ನಲ್ಲಿ ಸಾಗಿಸುತ್ತಿದ್ದರೂ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

Tags:
error: Content is protected !!