Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಕ್ರಿಕೆಟರ್‌ ಡೇವಿಡ್‌ ಜಾನ್ಸ್‌ನ್‌ ಸಾವು

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ, ಕರ್ನಾಟಕ ಮೂಲದ ಡೇವಿಡ್‌ ಜಾನ್ಸ್‌ನ್‌ ಇಂದು(ಜೂ.20) ಕೊನೆಯುಸಿರೆಳೆದಿದ್ದಾರೆ. 52 ವರ್ಷದ ಡೇವಿಡ್‌ ಜಾನ್ಸ್‌ನ್‌ ಕಟ್ಟಡದಿಂದ ಜಾರಿ ಬಿದ್ದು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ನಗರದ ಕೊತ್ತನೂರ ಠಾಣಾ ವ್ಯಾಪ್ತಿಯಲ್ಲಿರುವ ಕನಕಶ್ರೀ ಲೇಔಟ್‌ನಲ್ಲಿರುವ ಎಸ್‌ಎಲ್‌ವಿ ಪ್ಯಾರಡೈಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದ್ದು, ಸದ್ಯ ಈ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಡೇವಿಡ್‌ ಜಾನ್ಸ್‌ನ್‌ ನಿಧನಕ್ಕೆ ಕ್ರಿಕೆಟ್‌ ವಲಯದ ಆಟಗಾರರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

 

Tags: